ಬೆಂಗಳೂರು: ಮಳೆಗಾಲ ಮುಗಿದು ಚಳಿಗಾಲ ಬರುವ ಸಮಯವಾದರೂ ರಾಜ್ಯ ರಾಜಧಾನಿಯಲ್ಲಿ ಮಳೆ ನಿಂತಿಲ್ಲ. ವಾರದ ಬಿಡುವಿನ ನಂತರ ಮಳೆ ಅಬ್ಬರಿಸಿದ್ದು ಜನ ಜೀವನ ಮತ್ತೆ ಸಂಕಷ್ಟಕ್ಕೀಡಾಗಿದೆ.
ಈ ಬಾರಿ ಬೆಂಗಳೂರಲ್ಲಿ ದಾಖಲೆಯ ಮಳೆಯಾಗಿದ್ದು, ಬಿಟ್ಟು ಬಿಟ್ಟು ಮಳೆಯಾಗುತ್ತಿದೆ. ಇದರಿಂದಾಗಿ ಬೆಂಗಳೂರಿನ ಚರಂಡಿ ವ್ಯವಸ್ಥೆ, ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಮನೆಯೊಳಗೇ ಕೊಳಚೆ ನೀರು ನುಗ್ಗುತ್ತಿದೆ.
ನಿನ್ನೆ ಮಧ್ಯಾಹ್ನದಿಂದ ತಡರಾತ್ರಿವರೆಗೆ ಮಳೆ ಸುರಿದಿದ್ದರಿಂದ ಸಿಲ್ಕ್ ಬೋರ್ಡ್, ಟಿನ್ ಫ್ಯಾಕ್ಟರಿ, ವಿವಿಪುರಂ, ವಿಜಯನಗರ ಸೇರಿದಂತೆ ಹಲವೆಡೆ ಜನರು ಪಾಡು ಪಡುವಂತಾಯಿತು. ಇನ್ನೂ ನಾಲ್ಕು ದಿನ ಮಳೆ ಹೀಗೇ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಹಾಗಾಗಿ ಛತ್ರಿ ಹಿಡಿದು ಓಡಾಡುವುದು ಅನಿವಾರ್ಯ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ