ಏರ್`ಪೋರ್ಟ್`ನ ಮಹಿಳಾ ಪೊಲೀಸ್ ಪೇದೆ ಮೇಲೆ ಅತ್ಯಾಚಾರ

ಸೋಮವಾರ, 13 ಮಾರ್ಚ್ 2017 (17:10 IST)
ಬೆಂಗಳೂರಿನ ಸಿಐಎಸ್ಎಫ್ ಮಹಿಳಾ ಪೇದೆ ಮೇಲೆ ಅತ್ಯಾಚಾರ ನಡೆದಿರುವ ಪ್ರಕರಣ ಬೆಳಕಿಗೆ ಬಂದಿದೆ. ಏರ್`ಪೋರ್ಟ್`ನ ಕಸ್ಟಮ್ಸ್ ಇನ್ಸ್`ಪೆಕ್ಟರ್ ಗುರ್ಜರ್ ಅತ್ಯಾಚಾರ ಎಸಗಿದ್ದಾನೆ ಎಂದು ಬಾಗಲೂರು ಪೊಲೀಸ್ ಠಾಣೆಗೆ ಮಹಿಳಾ ಪೇದೆ ದೂರು ನೀಡಿದ್ದಾರೆ.

ಗುರ್ಜರ್ ನನ್ನನ್ನ ಮದುವೆಯಾಗುವುದಾಗಿ ಹೇಳಿದ್ದ. ಬಳಿಕ ಪೋಷಕರನ್ನ ಭೇಟಿ ಮಾಡಿಸುವುದಾಗಿ ನಂಬಿಸಿ ಮನೆಗೆ ಕರೆದೊಯ್ದು ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ. ಇದೀಗ, ಮದುವೆಯಾಗುವಂತೆ ಕೇಳಿದರೆ ಈಗಾಗಲೇ ನನಗೆ ಮದುವೆಯಾಗಿ ಹೆಂಡತಿ ಮತ್ತು ಮಕ್ಕಳು ಹೊರರಾಜ್ಯದಲ್ಲಿದ್ದಾರೆ ಎಂದು ಸಬೂಬು ಹೇಳುತ್ತಿದ್ದಾನೆ ಎಂದು ಪೇದೆ ದೂರಿನಲ್ಲಿ ತಿಳಿಸಿದ್ದಾಳೆ.

ದೂರು ದಾಖಲಾಗಿ 9 ದಿನ ಕಳೆದರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಬ ರೋಪ ಕೇಳಿಬಂದಿದೆ.

 

ವೆಬ್ದುನಿಯಾವನ್ನು ಓದಿ