ಮುಂಜಾನೆ ಟೇಕಲ್ ನಲ್ಲಿ ರೈಲು ತಡವಾದ ಹಿನ್ನೆಲೆ ಊರಿಗೆ ವಾಪಸ್ ಆಗಿದ್ದ ಸ್ನೇಹಿತರು, ಕೆರೆ ಬಳಿ ಪಾರ್ಟಿ ಮಾಡಿ ತೆಪ್ಪದಲ್ಲಿ ರೌಂಡ್ಸ್ ಮಾಡಲು ಹೋಗಿದ್ದರು. ತೆಪ್ಪ ಮುಗುಚಿದ ವೇಳೆ ನೀರಿನಲ್ಲಿ ಮುಳುಗುತ್ತಿದ್ದವರ ರಕ್ಷಣೆಗೆ ಸ್ಥಳೀಯರು ಮುಂದಾಗಿದ್ದಾರೆ. ಕೆರೆ ಮಧ್ಯದಲ್ಲಿ ಸಿಲುಕಿದ್ದ ಕಾರಣವಾಗಿ ರಕ್ಷಣೆ ಮಾಡಲು ಸಾಧ್ಯವಾಗಿಲ್ಲ.
ಕೋಲಾರ: ಕೆರೆಯಲ್ಲಿ ತೆಪ್ಪ ಮುಗುಚಿ ಬಿದ್ದು ಮೂವರು ಯುವಕರು ಜಲಸಮಾಧಿಯಾಗಿರುವ ಘಟನೆ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ನೇರಳೆಕೆರೆ ಬಳಿ ನಡೆದಿದೆ. ಚಿಕ್ಕವಲಗಮಾದಿ ನವೀನ್ (32), ನೇರಳೆಕೆರೆ ರಾಜೇಂದ್ರ (32) ಮತ್ತು ಮೋಹನ್ (28) ಮೃತಪಟ್ಟವರು. ಇವರ ಜೊತೆಗಿದ್ದ ಶಿವರಾಜ್ ಎಂಬಾತ ಊಟ ತರಲು ತೆರಳಿದ್ದರಿಂದ ಬದುಕುಳಿದಿದ್ದಾನೆ. ಇಂದು ಮುಂಜಾನೆ ಟೇಕಲ್ ನಲ್ಲಿ ರೈಲು ತಡವಾದ ಹಿನ್ನೆಲೆ ಊರಿಗೆ ವಾಪಸ್ ಆಗಿದ್ದ ಸ್ನೇಹಿತರು, ಕೆರೆ ಬಳಿ ಪಾರ್ಟಿ ಮಾಡಿ ತೆಪ್ಪದಲ್ಲಿ ರೌಂಡ್ಸ್ ಮಾಡಲು ಹೋಗಿದ್ದರು. ತೆಪ್ಪ ಮುಗುಚಿದ ವೇಳೆ ನೀರಿನಲ್ಲಿ ಮುಳುಗುತ್ತಿದ್ದವರ ರಕ್ಷಣೆಗೆ ಸ್ಥಳೀಯರು ಮುಂದಾಗಿದ್ದಾರೆ. ಕೆರೆ ಮಧ್ಯದಲ್ಲಿ ಸಿಲುಕಿದ್ದ ಕಾರಣವಾಗಿ ರಕ್ಷಣೆ ಮಾಡಲು ಸಾಧ್ಯವಾಗಿಲ್ಲ. ಮೂವರ ಶವಗಳಿಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಹುಡುಕಾಟ ನಡೆಸಿದ್ದಾರೆ. ಸ್ಥಳಕ್ಕೆ ಕೆಜಿಎಫ್ ಎಸ್ಪಿ ಡಿ.ಕೆ. ಧರಣಿ ದೇವಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಬಂಗಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.