ಮದ್ಯ ಪ್ರಿಯರ ಕಿಕ್ ಇಳಿಸಿದ ಬಿಯರ್!

ಸೋಮವಾರ, 26 ಜೂನ್ 2023 (20:52 IST)
ಮದ್ಯ ಪ್ರಿಯರಿಗೆ ಕುಡಿಯೋ ಮುಂಚೇನೆ ಕೆಲ ಮದ್ಯದ ದರಗಳು ಕಿಕ್ ಏರಿಸುತ್ತಿವೆ. ಕಳೆದ 15 ದಿನಗಳಿಂದ ಬಿಯರ್ ಪ್ರಿಯರಿಗೆ ದರ ಏರಿಕೆ ಬರೆ ಹೊಡೆಯುತ್ತಿದ್ದು, ಕುಡಿಯೋ ಮುಂಚೆನೆ ಮದ್ಯ ಪ್ರಿಯರಿಗೆ ಕಿಕ್ ಕೊಡುತ್ತಿದೆ. ಪ್ರತಿ ಬಿಯರ್ ಮೇಲೂ ಉತ್ಪಾದನಾ ಕಂಪನಿಗಳು 10ರಿಂದ 20 ರೂ ಬೆಲೆ ಏರಿಸಿವೆ. ಸರ್ಕಾರ ಸುಂಕ ಏರಿಕೆ ಮಾಡದಿದ್ರು, ಮದ್ಯ ಪ್ರಿಯರಿಗೆ ಬಿಯರ್ ಉತ್ಪಾದನೆ ಕಂಪನಿಗಳು ಶಾಕ್ ಕೊಟ್ಟಿವೆ. ಇತ್ತ ಮತ್ತೆ ಹೊಸ ಬಜೆಟ್​ನಲ್ಲಿ ಅಬಕಾರಿ ಸುಂಕ ಹೆಚ್ಚಳಿಸಲು ಸರ್ಕಾರ ಪ್ಲ್ಯಾನ್ ಮಾಡಿದೆ. ಸದ್ಯ ಮದ್ಯ ಪ್ರಿಯರ ಪರಿಸ್ಥಿತಿ ಕುಡಿದಾಗ ಕಿಕ್ ಏರಿದ್ರು, ಬಿಲ್ ಕೊಡುವಾಗಲೇ ಕಿಕ್ ಇಳಿಯೋ ಸ್ಥಿತಿಯಲ್ಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ