ಮತಾಂತರ, ಸುಳ್ಳು ದಾಖಲೆ ನೀಡಿ ರಾಜ್ಯಕ್ಕೆ ಬಂದ ಆರೋಪ; ದೂರು ನೀಡಿದ ತಹಶೀಲ್ದಾರ್

ಶನಿವಾರ, 9 ಮೇ 2020 (09:51 IST)
Normal 0 false false false EN-US X-NONE X-NONE

ಕೋಲಾರ : ಮತಾಂತರ, ಸುಳ್ಳು ದಾಖಲೆ ನೀಡಿ ರಾಜ್ಯಕ್ಕೆ ಬಂದ ಆರೋಪ ಕೋಲಾರ ಜಿಲ್ಲೆ ಮಾಲೂರು ತಹಶೀಲ್ದಾರ್ ಮಾಲೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

 

ಲಾಕ್ ಡೌನ್ ವೇಳೆ ರಾಜ್ಯದ ಜನರು ಗುಜರಾತ್ ನ ಸೂರತ್ ನಲ್ಲಿ ಸಿಲುಕಿಕೊಂಡಿದ್ದರು. ಲಾಕ್ ಡೌನ್ ಸಡಿಲಿಕೆಯಾಗುತ್ತಿದ್ದಂತೆ ವಾಪಾಸಾಗಿದ್ದರು. ಕೋಲಾರ ಜಿಲ್ಲೆ ಮಾಲೂರಿನ 44 ಜನರು ವಾಪಾಸಾಗಿದ್ದರು. ಇವರ ಜತೆ ಉತ್ತರ ಪ್ರದೇಶದ ಇಬ್ಬರು, ತಮಿಳುನಾಡು, ಬೆಂಗಳೂರಿನ ಪಾದರಾಯನಪುರದ ಒಬ್ಬ ಬಂದಿದ್ದನು.
 

ಮಾಲೂರಿನಲ್ಲಿ ಅಧಿಕಾರಿಗಳಿಂದ 44 ಜನರ ಮಾಹಿತಿ ಸಂಗ್ರಹದ ವೇಳೆ ಮತಾಂತರ, ಸುಳ್ಳು ದಾಖಲೆ ನೀಡಿರುವುದು ಬೆಳಕಿಗೆ ಬಂದಿದೆ. ಹೀಗಾಗಿ ತಹಶೀಲ್ದಾರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಎನ್ನಲಾಗಿದೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ