ಅಂಬರೀಶ್ಗೆ ಮಂಡ್ಯದ ಗಂಡು ಬಿರುದು ಕೊಟ್ಟಿದ್ದೇ ನಾನು ಎಂದವರಾರು ಗೊತ್ತಾ?
ಅಂಬರೀಶ್ಗೆ ಮಂಡ್ಯದ ಗಂಡು ಬಿರುದು ಕೊಟ್ಟಿದ್ದು ನಾನೇ. ಅವರ ಸಾವು ನನಗೆ ನೋವು ತಂದಿದೆ. ಅವರದ್ದು ಇನ್ನೂ ಚಿಕ್ಕ ವಯಸ್ಸು ಎಂದು ಮಾಜಿ ಸಂಸದ ಹೇಳಿದ್ದಾರೆ.
ಮಾಜಿ ಸಂಸದ ಜಿ. ಮಾದೇಗೌಡ ಅವರು ಅಂಬರೀಶ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಅಂಬರೀಶ್ ಅವರು ಮೃದು ಸ್ವಭಾವದ ವ್ಯಕ್ತಿ. ಅವರ ಜೊತೆ ತುಂಬಾ ಒಡನಾಟ ಹೊಂದಿದ್ದೆ. ಅಲ್ಲದೇ ಅವರ ತಂದೆಯೊಂದಿಗೂ ಒಡನಾಟವಿತ್ತು. ಅವರು ರಾಜಕೀಯವಾಗಿಯೂ ಹೆಸರು ಮಾಡಿದ್ದರು. ಅವರ ಸಾವಿನಿಂದ ರಾಜ್ಯಕ್ಕೆ , ದೇಶಕ್ಕೆ ನಷ್ಟವಾಗಿದೆ ಎಂದಿದ್ದಾರೆ.
ರಾಜಕೀಯದಲ್ಲಿ ಸಚಿವರಾಗಿಯೂ ಅಂಬಿ ಹೆಸರು ಮಾಡಿದ್ದರು. ಅವರು ನಮ್ಮ ಊರಿನವರು. ಹಾಗಾಗಿ ಅವರ ಕುಟುಂಬದ ಜೊತೆ ಒಡನಾಟ ಇತ್ತು. ಸಾಮಾನ್ಯ ವರ್ಗದ ವ್ಯಕ್ತಿ ಎತ್ತರಕ್ಕೆ ಬೆಳದಿದ್ದರು ಎಂದು ಮಾದೇಗೌಡರು ಅಂಬಿಯನ್ನು ಸ್ಮರಿಸಿದ್ದಾರೆ.