ಪಾಕ್ ವಿರುದ್ಧ ಅಮೆರಿಕೆ ಕೆಂಡಾಮಂಡಲ

ಶನಿವಾರ, 2 ಮಾರ್ಚ್ 2019 (17:10 IST)
ಇಡೀ ವಿಶ್ವವೇ ಪಾಕಿಸ್ತಾನದ ದುಷ್ಟತನಕ್ಕೆ ಹಾಗೂ ಅದರ ಉಗ್ರವಾದಿತನಕ್ಕೆ ಖಂಡಿಸುತ್ತಿದೆ. ಏತನ್ಮಧ್ಯೆ ಪಾಕಿಸ್ತಾನಕ್ಕೆ ಹೊಸದೊಂದು ಸಂಕಷ್ಟ ಶುರುವಾಗಿದೆ.

ಉಗ್ರರ ವಿರುದ್ಧದ ಕಾರ್ಯಾಚರಣೆ ನಡೆಸಲು ನೀಡಿದ್ದ ಎಫ್ – 16 ಯುದ್ಧ ವಿಮಾನವನ್ನು ಭಾರತದ ಸೇನಾ ನೆಲೆಗಳ ಮೇಲೆ ದಾಳಿ ಮಾಡಲು ದುರ್ಬಳಕೆ ಮಾಡಿಕೊಂಡ ಪಾಕಿಸ್ತಾನದ ಕ್ರಮಕ್ಕೆ ಅಮೆರಿಕ ಗರಂ ಆಗಿದೆ.  ಈ ಸಂಬಂಧ ವಿವರಣೆ ನೀಡುವಂತೆ ಪಾಕಿಸ್ತಾನಕ್ಕೆ ಖಡಕ್ ಸೂಚನೆ ನೀಡಿದೆ.

ಭಾರತದ ಸೇನಾ ನೆಲೆಗಳ ಮೇಲೆ ದಾಳಿ ನಡೆಸಿದ್ದಲ್ಲದೆ, ಪೈಲೆಟ್ ಬಂಧಿಸಿದ ಕ್ರಮಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಟೀಕೆ, ಅವಮಾನಕ್ಕೆ ತುತ್ತಾಗಿದ್ದ ಪಾಕಿಸ್ತಾನಕ್ಕೆ ಇದೀಗ ಮತ್ತೊಮ್ಮೆ ಅಮೆರಿಕ ಚಾಟಿ ಬೀಸಿದ್ದು, ಮತ್ತೊಮ್ಮೆ ಮುಜುಗರ ಮತ್ತು ಸಂಕಷ್ಟಕ್ಕೆ ಸಿಲುಕುವಂತಾಗಿದೆ.

ಎಫ್ – 16 ಯುದ್ಧ ವಿಮಾನವನ್ನು ಪಾಕಿಸ್ತಾನಕ್ಕೆ ನೀಡುವ ಸಂದರ್ಭದಲ್ಲಿ ಅಮೆರಿಕದ ಪೂರ್ವಾನುಮತಿಯಿಲ್ಲದೆ, ಎಫ್ – 16 ಯುದ್ಧ ವಿಮಾನವನ್ನು ಬಳಸುವಂತಿಲ್ಲ ಎನ್ನುವ ಕಟ್ಟುನಿಟ್ಟಿನ ಷರತ್ತು ವಿಧಿಸಿದ್ದರೂ ಅದನ್ನು ಉಲ್ಲಂಘಿಸಿ ಭಾರತದ ಮೇಲೆ ದಾಳಿಗೆ ಬಳಸಿಕೊಂಡಿರುವ ಕ್ರಮದ ಕುರಿತು ವಿವರ ನೀಡಬೇಕು. ಹೀಗಂತ ಅಮೆರಿಕದ ರಕ್ಷಣಾ ಇಲಾಖೆಯ ಲೆಫ್ಟಿಂನೆಂಟ್ ಕರ್ನಲ್ ಕೋನ್ ಪ್ಲಾಂಕ್ನರ್ ಪಾಕಿಸ್ತಾನಕ್ಕೆ ಸೂಚನೆ ನೀಡಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ