ಅಮಿತ್ ಶಾ ಅವರದ್ದು ಒಂಥರಾ ರೌಡಿಸಂ; ಯೋಗೇಶ್ವರ್ ಆಡಿಯೋ ಲೀಕ್
ಕೇಂದ್ರ ಗೃಹ ಸಚಿವ ನಮ್ಮ ಅಮಿತ್ ಶಾ ಅವರದ್ದು ಒಂಥರಾ ರೌಡಿಸಂ ಕಣಯ್ಯ, ಪಾರ್ಟಿ ವಿರುದ್ಧ ಯಾರಾದ್ರೂ ಮಾತನಾಡಿದ್ರೆ ಅಷ್ಟೆ ಅವರ ಕಥೆ ಎಂದು ಬಿಜೆಪಿ ಎಂಎಲ್ ಸಿ ಯೋಗೇಶ್ವ ಮಾತನಾಡಿರುವ ಆಡಿಯೋವೊಂದು ವೈರಲ್ ಆಗಿದೆ.ರಾಜ್ಯ ವಿಧಾನ ಸಭಾ ಚುನಾವಣೆಯ ಹೊತ್ತಲ್ಲೇ ಕರ್ನಾಟಕದಿಂದ ದೆಹಲಿ ರಾಜಕಾರಣದವರೆಗೂ ಮಾತನಾಡಿರೋ ಸ್ಫೋಟಕ ಆಡಿಯೋವನ್ನು ಇದೀಗ ಎಲ್ಲೆಡೆ ಬರೀ ವೈರಲ್ ಆಗಿದೆ....ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಮಾತನಾಡಿದ್ದಾರೆ ಎನ್ನಲಾದ ಆಡಿಯೋದಲ್ಲಿ ರಾಜ್ಯ ರಾಜಕಾರಣದ ಬಗ್ಗೆ ಬಿಸಿ ಬಿಸಿ ಚರ್ಚೆ ಆಗಿದೆ. ಅದರಲ್ಲೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರದ್ದು ಒಂಥರಾ ರೌಡಿಸಂ ಕಣಯ್ಯ ಎಂದು ಯೋಗೇಶ್ವರ್ ಹೇಳಿರೋದು ಸಂಚಲನ ಸೃಷ್ಟಿಸಿದೆ.