ಕರ್ನಾಟಕ ಗೆಲ್ಲಲು ಮೋದಿ-ಶಾ ಬಿಗ್ ಪ್ಲ್ಯಾನ್!
ಇಷ್ಟು ದಿನ ಮಹದಾಯಿ ನೀರಿನ ಸಮಸ್ಯೆ ಬಗ್ಗೆ ಮೌನವಾಗಿದ್ದ ಪ್ರಧಾನಿ ಮೋದಿ ಇದೀಗ ಚುನಾವಣೆಯ ಹೊಸ್ತಿಲಲ್ಲಿ ಈ ಸಮಸ್ಯೆಗೆ ಪರಿಹಾರ ನೀಡುವ ಮೂಲಕ ಉತ್ತರ ಕರ್ನಾಟಕದ ಜನರ ಸೆಳೆಯಲು ಮಾಸ್ಟರ್ ಪ್ಲ್ಯಾನ್ ಮಾಡಿದ್ದಾರೆ ಎನ್ನಲಾಗಿದೆ.
ಹೇಗದರೂ ಸರಿಯೇ ಕರ್ನಾಟಕದಲ್ಲಿ ಮತ್ತೆ ಅಧಿಕಾರಕ್ಕೆ ಬರಲು ಹವಣಿಸುತ್ತಿರುವ ಬಿಜೆಪಿ ನಾಯಕರು ಕರ್ನಾಟಕ ಜನರ ಬಹುಮುಖ್ಯ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗಿ ಆ ಮೂಲಕ ಜನರಿಗೆ ಹತ್ತಿರವಾಗಲು ಯತ್ನ ನಡೆಸಿದ್ದಾರೆ. ರಾಜ್ಯ ನಾಯಕರನ್ನೇ ನೆಚ್ಚಿ ಕೂರದೇ ರಾಷ್ಟ್ರ ನಾಯಕರೇ ಕರ್ನಾಟಕವನ್ನು ತೆಕ್ಕೆಗೆ ಸೆಳೆಯಲು ರಣತಂತ್ರ ರೂಪಿಸಿದ್ದಾರೆ.