ಉಪ ಚುನಾವಣೆ - ಮಂತ್ರಿಸಿದ ನಿಂಬೆ ಹಣ್ಣಿಗೆ ಮೊರೆಹೋದ ಅನರ್ಹ ಶಾಸಕ
ಅನರ್ಹ ಶಾಸಕರೊಬ್ಬರು ಉಪ ಚುನಾವಣೆಯಲ್ಲಿ ಹೇಗಾದರೂ ಮಾಡಿ ಗೆಲ್ಲೋಕೆ ಅಂತ ತೀವ್ರ ಕಸರತ್ತು ನಡೆಸಿದ್ದಾರೆ.
ಕೆ.ಆರ್.ಪೇಟೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿರೋ ನಾರಾಯಣಗೌಡ, ದಢೀಘಟ್ಟದಲ್ಲಿರೋ ಚಿಕ್ಕಮ್ಮ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಅರ್ಚಕರು ನಿಂಬೆ ಹಣ್ಣುಗಳನ್ನು ನಾರಾಯಣಗೌಡರಿಗೆ ನೀಡಿದ್ದು ಚರ್ಚೆಗೆ ಕಾರಣವಾಗಿದೆ.