ರಕ್ತ ಮಾರಾಟ ಮಾಡಿ ರೈತರನ್ನು ಕಾಪಾಡುತ್ತೇನೆ ಎಂದ ಅನರ್ಹ ಶಾಸಕ

ಶುಕ್ರವಾರ, 8 ನವೆಂಬರ್ 2019 (19:17 IST)
ಅನರ್ಹ ಶಾಸಕರೊಬ್ಬರು ಜನರನ್ನು ಒಲಿಸಿಕೊಳ್ಳುವ ಭರದಲ್ಲಿ ನೀಡಿರೋ ಹೇಳಿಕೆಗೆ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿವೆ.

ಮಂಡ್ಯದ ಸಂತೇಬಾಚಹಳ್ಳ ಆಚಮನಹಳ್ಳಿ ಕೆರೆಗೆ ಶಂಕುಸ್ಥಾಪನೆ ನೆರವೇರಿಸಿದ ಅನರ್ಹ ನಾರಾಯಣಗೌಡ,
ಕೆರೆಗೆ ನೀರು ಹರಿಸುವ ಕಾರ್ಯಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.

ಆಚಮನಹಳ್ಳಿ ಕೆರೆಗೆ ಆಚಮನಹಳ್ಳಿ ಗ್ರಾಮಸ್ಥರು ಹಾಗೂ ಯಲದಹಳ್ಳಿ ಗ್ರಾಮಸ್ಥರು ಒಗ್ಗೂಡಿ ತಮ್ಮ ಕೆರೆಗೆ ನೀರು ತುಂಬಿಸುವ ಕಾರ್ಯಕ್ಕೆ ಅನರ್ಹ ಶಾಸಕರ ನಾರಾಯಣಗೌಡರ  ನೆರವಿನಿಂದ ಶಂಕುಸ್ಥಾಪನೆ ಮಾಡಿಸಿದ್ರು.

ನಾನು ಬಡ ಕುಟುಂಬದಲ್ಲಿ ಹುಟ್ಟಿ ಬಂದಿದ್ದೇನೆ. ನಾನು ರೈತರಿಗೋಸ್ಕರ ನನ್ನ ಪ್ರಾಣವನ್ನು ತ್ಯಾಗ ಮಾಡುತ್ತೇನೆ. ರಕ್ತ ಮಾರಿಯಾದರೂ  ನಾನು ರೈತರನ್ನು ಕಾಪಾಡುತ್ತೇನೆ. ನಾನು ರಾಜಕೀಯ ಮಾಡಲು ಬಂದಿಲ್ಲ. ನಾನು
ಕೆ.ಆರ್. ಪೇಟೆಯ ಅಭಿವೃದ್ಧಿಗೋಸ್ಕರ ಬಂದಿದ್ದೇನೆ. ಸಂಪೂರ್ಣ ಅಭಿವೃದ್ಧಿ ಅಭಿವೃದ್ಧಿಯನ್ನು ನಾನು ಮಾಡುತ್ತೇನೆ ಅಂತ ಅನರ್ಹ ಶಾಸಕ ನಾರಾಯಣಗೌಡ ಹೇಳಿದ್ದಾರೆ.  


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ