ಕೇಂದ್ರ ಸಚಿವರಾದ ಅನಂತ್ ಕುಮಾರ್ ಹೆಗಡೆ

ಭಾನುವಾರ, 3 ಸೆಪ್ಟಂಬರ್ 2017 (12:53 IST)
ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆಯವರಿಗೆ ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿ ಕೇಂದ್ರದ ರಾಜ್ಯ ಸಚಿವ ಸ್ಥಾನ ದೊರೆತಿದೆ. 

ಇಂದು ಬೆಳಗ್ಗೆ 10.30ಕ್ಕೆ ರಾಷ್ಟ್ರಪತಿ ಭವನದ ಅಶೋಕ ಹಾಲ್‍ನಲ್ಲಿ ನಡೆದ ಕೇಂದ್ರ ಸಂಪುಟ ಪುನಾರಚನೆಯಲ್ಲಿ ಸಂಸದ ಅನಂತಕುಮಾರ್ ಹೆಗಡೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. 
 
ಹೊಸ ಸಚಿವರ ಪಟ್ಟಿ ಹರ್ದೀಪ್ ಸಿಂಗ್ ಪುರಿ, ಗಜೇಂದ್ರ ಶೇಖವತ್, ಅಶ್ವಿನಿಕುಮಾರ್ ಚೌಭೆ, ಶಿವ ಪ್ರತಾಪ್ ಶುಕ್ಲಾ, ರಾಜ್ ಕುಮಾರ್ ಸಿಂಗ್, ಸತ್ಯಪಾಲ್ ಸಿಂಗ್, ಅಲ್ಫಾನ್ಸೋ ಕಣ್ಣತನಂಗೆ ಸಚಿವ ಸ್ಥಾನ ದೊರೆತಿದೆ.
 
ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್ ಅವರಿಗೆ ಸಂಪುಟ ದರ್ಜೆಗೆ ಬಡ್ತಿ ನೀಡಲಾಗಿದೆ 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ