3ನೇ ದಿನವೂ ಮುಂದುವರಿದ ಅಂಗನವಾಡಿ ಕಾರ್ಯಕರ್ತರ ಪ್ರತಿಭಟನೆ

ಬುಧವಾರ, 22 ಮಾರ್ಚ್ 2017 (09:20 IST)
ನೀ ಕೊಡೆ.. ನಾ ಕೊಡೆ.. ಎನ್ನುವಂತಾಗಿದೆ ರಾಜ್ಯ ಸರ್ಕಾರ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಜಟಾಪಟಿ. ಕನಿಷ್ಠ ವೇತನ 10 ಸಾವಿರ ರೂಪಾಯಿಗೆ ಏರಿಕೆ ಮಾಡುವವರೆಗೂ ಇಟ್ಟ ಹೆಜ್ಜೆ ಹಿಂದಿಡುವುದಿಲ್ಲ ಎಂದು ಪಟ್ಟು ಹಿಡಿದಿರುವ ಅಂಗನವಾಡಿ ಕಾರ್ಯಕರ್ತೆಯರು ಸತತ 3ನೇ ದಿನವೂ ಅಹೋರಾತ್ರಿ ಹೋರಾಟ ಮುಂದುವರೆಸಿದ್ದಾರೆ.

ಫ್ರೀಡಂ ಪಾರ್ಕ್ ಬಳಿ ಪುಟ್ಟ ಮಕ್ಕಳನ್ನ ಇಟ್ಟುಕೊಂಡು 20 ಸಾವಿರಕ್ಕೂ ಅಧಿಕ ಕಾರ್ಯಕರ್ತೆಯರು ಧರಣಿ ನಡೆಸುತ್ತಿದ್ದಾರೆ. ಸುಡು ಬಿಸಿಲ ನಡುವೆಯೂ ಜಗ್ಗದೆ ಹೋರಾಟ ನಡೆಸುತ್ತಿದ್ದಾರೆ. ಈ ಮಧ್ಯೆ, ಕಾರ್ಯಕರ್ತೆಯರ ವೇತನ ಅನುಪಾತವನ್ನ 60-40ಕ್ಕೆ ಇಳಿಸಿದ ಕೆಂದ್ರಸರ್ಕಾರದ ವಿರುದ್ಧವೂ ಕಾರ್ಯಕರ್ತೆಯರು ಕಿಡಿ ಕಾರಿದ್ದಾರೆ. ಕೇಂದ್ರ ಕೊಡಬೇಕಾದ್ದನ್ನ ಕೊಡಲಿ, ರಾಜ್ಯ ಸರ್ಕಾರ ಕೊಡಬೇಕಾದದ್ದನ್ನ ಕೊಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಮಧ್ಯೆ, ಇಂದು ಸಿಎಂ ಸಿದ್ದರಾಮಯ್ಯ, ಧರಣಿ ನಿರತ ಕಾರ್ಯಕರ್ತೆಯರ ಜೊತೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.

ವೆಬ್ದುನಿಯಾವನ್ನು ಓದಿ