ಅಂಗನವಾಡಿ ಕಾರ್ಯಕರ್ತೆಯರಿಗೆ ಸಂಬಳವಿಲ್ಲ, ಮಕ್ಕಳಿಗೆ ಚಿಕ್ಕಿಯೂ ಕೊಡ್ತಿಲ್ಲ: ಎಲ್ಲಾ ಗ್ಯಾರಂಟಿ ಮಹಿಮೆ

Krishnaveni K

ಮಂಗಳವಾರ, 15 ಅಕ್ಟೋಬರ್ 2024 (08:53 IST)
Photo Credit: BJP X
ಬೆಂಗಳೂರು: ಅಂಗನವಾಡಿ ಕಾರ್ಯಕರ್ತೆಯರಿಗೆ ವೇತನ ಬಂದಿಲ್ಲ. ಮಕ್ಕಳಿಗೆ ಕೊಡ್ತಿದ್ದ ಪೌಷ್ಠಿಕ ಆಹಾರ, ಚಿಕ್ಕಿ ಕೂಡಾ ಬಂದ್ ಆಗಿದೆ. ಎಲ್ಲವೂ ಗ್ಯಾರಂಟಿ ಮಹಿಮೆ ಎಂಬ ಆರೋಪ ಕೇಳಿಬರುತ್ತಿದೆ.

ರಾಜ್ಯ ಸರ್ಕಾರ ಅಂಗನವಾಡಿ ಕಾರ್ಯಕರ್ತೆಯರ ಸಂಬಳಕ್ಕೆ ಕತ್ತರಿ ಹಾಕಿರುವುದು ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ರಾಜ್ಯ ಬಿಜೆಪಿ ಕೂಡಾ ಪ್ರಶ್ನೆ ಮಾಡಿದ್ದು, ಇದು ರಾಜ್ಯ ಸರ್ಕಾರ ದಿವಾಳಿಯಾಗಿರುವುದಕ್ಕೆ ಸಾಕ್ಷಿ ಎಂದು ಟೀಕೆ ಮಾಡಿದೆ. ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು 3-4 ತಿಂಗಳಿನಿಂದ ಸಂಬಳವನ್ನೇ ನೀಡಿಲ್ಲ ಎಂದು ಆರೋಪಿಸಿದೆ.

ಈ ಮೊದಲು ಅಂಗನವಾಡಿ ವಿದ್ಯಾರ್ಥಿಗಳಿಗೆ ಪ್ರತೀ ತಿಂಗಳಿಗೊಮ್ಮೆ ಹೆಸರುಕಾಳು ಸೇರಿದಂತೆ ಪೌಷ್ಠಿಕ ಆಹಾರ ನೀಡಲಾಗುತ್ತಿತ್ತು. ಪ್ರತಿನಿತ್ಯ ಚಿಕ್ಕಿ ನೀಡಿ ಕಳುಹಿಸಲಾಗುತ್ತಿತ್ತು. ಆದರೆ ಈಗ ಅದೆಲ್ಲವೂ ಬಂದ್ ಆಗಿದೆ. ಮಧ್ಯಾಹ್ನ ಊಟ ಮಾತ್ರ ನೀಡಲಾಗುತ್ತಿದೆ. ಗ್ಯಾರಂಟಿ ಯೋಜನೆ ಬಂದ ಮೇಲೆ ರಾಜ್ಯ ಸರ್ಕಾರ ಇವೆಲ್ಲದಕ್ಕೂ ಸದ್ದಿಲ್ಲದೇ ಕತ್ತರಿ ಹಾಕಿದೆ.

ಇದೀಗ ಅಂಗನವಾಡಿ ಕಾರ್ಯಕರ್ತೆಯರಿಗೆ ಸಂಬಳವೂ ಆಗುತ್ತಿಲ್ಲ ಎಂಬ ಅರೋಪ ಕೇಳಿಬಂದಿದೆ. ದೇಶದ್ರೋಹಿಗಳ ಬಿಡುಗಡೆಗೆ ಮಿಡಿಯುವ ಸಿದ್ದರಾಮಯ್ಯನವರು, ಬಡಪಾಯಿ ಅಂಗನವಾಡಿ ಕಾರ್ಯಕರ್ತರ ಸಂಬಳದ ವಿಚಾರಕ್ಕೆ ಯಾಕೆ ಸ್ಪಂದಿಸುತ್ತಿಲ್ಲ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಜವಾಬ್ಧಾರಿ ಮರೆತಿದ್ದು ಯಾಕೆ ಎಂದು ಬಿಜೆಪಿ ಪ್ರಶ್ನೆ ಮಾಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ