ಅಂಗನವಾಡಿ ಕಾರ್ಯಕರ್ತೆಯರಿಂದ ಸರ್ಕಾರಕ್ಕೆ ಇಂದು ಸಂಜೆಯವರೆಗೆ ಡೆಡ್ ಲೈನ್

ಮಂಗಳವಾರ, 31 ಜನವರಿ 2023 (19:49 IST)
ಅಂಗನವಾಡಿ ಕಾರ್ಯಕರ್ತರು ಕಳೆದ 9 ದಿನಗಳಿಂದ  ಫ್ರೀಡಂಪಾರ್ಕ್ ನಲ್ಲಿ ಧರಣಿ ನಡೆಸುತ್ತಿದ್ದಾರೆ.ಈ ವೇಳೆ ಇಂದು ಬೇಡಿಕೆಗಳ ಆದೇಶ ಹೊರಬೀಳದಿದ್ದರೆ ನಾಳೆ ಸಿಎಂ ಮನೆ ಮುತ್ತಿಗೆ ಹಾಕುವುದಾಗಿ ಅಂಗನವಾಡಿ ಕಾರ್ಯಕರ್ತೆಯರು ಎಚ್ಚರಿಕೆ ನೀಡಿದ್ದಾರೆ.
 
ಲಾಠಿ ಚಾರ್ಜ್, ಗೋಲಿಬಾರ್ ಆದ್ರೂ ನಾವು ಸುಮ್ಮನಿರೋದಿಲ್ಲ.ಯಾವತ್ತೋ ಒಂದು ದಿನ ಸಾಯಬೇಕು, ನಾಳೆಯೇ ಸತ್ತರೆ ಏನೂ ಆಗೊಲ್ಲ.ಸತತ 9 ದಿನಗಳಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಯುತ್ತಿದೆ.ನಮ್ಮ ಹೋರಾಟದ ಕೂಗು ಸರ್ಕಾರದ ಕಿವಿಗೆ ಬಿದ್ದಿಲ್ಲ.ಇಂದು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸಭೆ ಆಗಬೇಕು.ಇಲ್ಲವಾದ್ರೆ ನಾಳೆ 15 ಸಾವಿರ ಅಂಗನವಾಡಿ ಕಾರ್ಯಕರ್ತೆಯರಿಂದ ಸಿಎಂ ಮನೆ ಮುತ್ತಿಗೆ ಹಾಕ್ತೀವಿ ಎಂದು ಸಿಐಟಿಯು ಸಂಘಟನೆಯ ರಾಜ್ಯಾಧ್ಯಕ್ಷೆ ವರಲಕ್ಷ್ಮಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ