ನಮ್ಮ ಮೆಟ್ರೋ ಪ್ರಯಾಣಿಕರಿಗೆ ಮತ್ತೊಂದು ಗುಡ್ ನ್ಯೂಸ್

ಗುರುವಾರ, 31 ಆಗಸ್ಟ್ 2023 (15:00 IST)
ಮೆಟ್ರೋ ಪ್ರಯಾಣಿಕರಿಗೆ ಬಿ ಎಂ ಆರ್ ಸಿ ಎಲ್ ಗುಡ್ ನ್ಯೂಸ್ ಕೊಟ್ಟಿದೆ.ನೇರಳೆ ಮಾರ್ಗದಲ್ಲಿ ವಾರದ 5 ದಿನದಲ್ಲಿ ಹೆಚ್ಚುವರಿ ಟ್ರಿಪ್​ಗೆ ನಿರ್ಧಾರ ಮಾಡಿದೆ.ಪೀಕ್​ ಅವರ್​ನಲ್ಲಿ ಹೆಚ್ಚುವರಿ ಸೇವೆ ಕೊಡಲು ಬಿಎಂಆರ್​ಸಿಎಲ್​​ ನಿರ್ಧಾರ ಮಾಡಿದ್ದು,ಸೆ.01 ರಿಂದ ಹೆಚ್ಚುವರಿ ಟ್ರಿಪ್ ಮೆಟ್ರೋ ಸೇವೆ ಆರಂಭವಾಗಲಿದೆ.ಹೆಚ್ಚುವರಿ ಟ್ರಿಪ್ ಬಗ್ಗೆ ಬಿ ಎಂ ಆರ್ ಸಿ ಎಲ್ ಮಾಹಿತಿ ನೀಡಿದೆ.ಸೋಮವಾರದಿಂದ ಶುಕ್ರವಾರದವರೆಗೆ ಹೆಚ್ಚುವರಿ ಟ್ರಿಪ್ ನಮ್ಮ‌ ಮೆಟ್ರೋ ನಡೆಸಲಿದೆ.ಮೆಜೆಸ್ಟಿಕ್ ನಿಲ್ದಾಣದಿಂದ ಎಂ.ಜಿ ರೋಡ್​ವರೆಗೆ ಹೆಚ್ಚುವರಿ ಕಾರ್ಯಾಚರಣೆ ಆಗಲಿದೆ.ಬೈಯಪ್ಪನಹಳ್ಳಿಗೆ ತೆರಳುವವರು ಎಂ.ಜಿ ರೋಡ್ ನಿಲ್ದಾಣದಲ್ಲಿ ಇಳಿದು ಬಳಿಕ ಮತ್ತೊಂದು ರೈಲು ಹತ್ತಿ ತೆರಳಬಹುದು ಎಂದು ಬಿ ಎಂ ಆರ್ ಸಿ ಎಲ್ ಪ್ರಕಟಣೆ ಹೊರಡಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ