ಮತ್ತೊಂದು ಹೆಗ್ಗಳಿಕೆಗೆ ಪಾತ್ರವಾದ ನಮ್ಮ ಹೆಮ್ಮೆಯ ನಂದಿನಿ ಬ್ರಾಂಡ್

ಶುಕ್ರವಾರ, 4 ಆಗಸ್ಟ್ 2023 (14:00 IST)
ಒಂದಲ್ಲ ಒಂದು ಸುದ್ದಿಯ ಮೂಲಕ ಸದ್ದು ಮಾಡುತ್ತಲೇ ಇರುವ ನಮ್ಮ ಹೆಮ್ಮೆಯ ನಂದಿನಿ ಬ್ರಾಂಡ್ ಇದೀಗ ಮತ್ತೊಂದು ಸುದ್ದಿಯ ಮೂಲಕ ಸದ್ದು ಮಾಡುತ್ತಿದೆ. ಹೌದು ವಿಕ್ಷಕರೆ...ಪ್ರಮುಖ ಮಾರ್ಕೆಟಿಂಗ್ ಗಲಲ್ಲಿ ವಂದಾದ ಡೇಟಾ ಆಂಡ್ ಅನಾಲಿಟಿಕ್ಸ್ ಕಂಪನಿಯಾದ ಕಾಂತಾರ್ ‘ಬ್ರ್ಯಾಂಡ್ ಫುಟ್‌ಪ್ರಿಂಟ್ 2023 ಇಂಡಿಯಾ’ ಟಾಪ್ 10 ಬ್ರ್ಯಾಂಡ್‌ ರ್ಯಾಂ ಕಿಂಗ್‌ ವರದಿಯನ್ನು ಪ್ರಕಟಣೆ ಮಾಡಿದ್ದು, ಅದರಲ್ಲಿ ನಮ್ಮ ರಾಜ್ಯದ ಹೆಮ್ಮೆಯ (KMF) ನಂದಿನಿಬ್ರ್ಯಾಂಡ್. 5ನೇ ಸ್ಥಾನ ಗಿಟ್ಟಿಸಿಕೊಂಡಿದೆ.ಈ ಮೊದಲ 6ನೇ ಸ್ಥಾನದಲ್ಲಿದ್ದ ನಂದಿನ ಇದೀಗ 5ನೇ ಸ್ಥಾನ ಪಡೆದಿರೋದು ಕನ್ನಡಿರೆಲ್ಲ ಹೆಮ್ಮೆ ಪಡೊ ವಿಷಯವಾಗಿದೆ. ಇನ್ನೂ ಯಾವ ಯಾವ ಬ್ರ್ಯಾಂಡ್‌ಗಳು ಎಷ್ಟನೆ ಸ್ಥಾನ ಪಡೆದಿವೆ ಅಂತಾ ನೊಡೊದಾದರೆ. ಪಾರ್ಲೆ ಮೊದಲ ಸ್ಥಾನ ಪಡೆದರೆ, ಬ್ರಿಟಾನಿಯಾ ಎರಡನೇ ಸ್ಥಾನ ಪಡೆದು ಕೊಂಡಿದೆ, ಇನ್ನೂ ನಮ್ಮ ನಂದಿನಿ ಬ್ರಾಂಡಗೆ ಪೈಪೊಟಿ ಕೊಡಲ್ಲೂ ಬಂದಿದ ಅಮುಲ್ ಮೂರನೇ ಸ್ಥಾನ ಪಡೆದಿದ್ದು ನಮ್ಮ ಹೆಮ್ಮೆಯ ನಂದಿನಿ ಐದನೇ ಸ್ಥಾನ ಪಡೆದು ಕೊಂಡಿದ್ದು, ನಮಗೆಲ್ಲ ಹೆಮ್ಮೆ ಪಡೊ ವಿಷಯವಾಗಿದೆ.

ಇನ್ನೂ ಕನ್ಸ್ಯೂಮರ್ ರೀಚ್ ಪಾಯಿಂಟ್‌ಗಳ ಆಧಾರದ ಮೇಲೆ ಪ್ರತಿ ಬ್ರ್ಯಾಂಡ್ ಅನ್ನು ಶ್ರೇಣೀಕರಿಸಿದೆ. ದೇಶದಲ್ಲಿರುವ ಜನರು, ಆ ಪೈಕಿ ನಿರ್ದಿಷ್ಟ ಬ್ರ್ಯಾಂಡ್ ಖರೀದಿ ಮಾಡುವ ಜನರ ಸಂಖ್ಯೆ, 1 ವರ್ಷದಲ್ಲಿ ಅದೇ ಉತ್ಪನ್ನವನ್ನು ಜನರು ಎಷ್ಟು ಬಾರಿ ಖರೀದಿಸಿದ್ದಾರೆ ಎನ್ನುವುದನ್ನು ಪರಿಗಣಿಸಿಕೊಂಡು ಈ ವರದಿಯನ್ನ ಮಾಡಲಾಗುತ್ತದೆ. ನವೆಂಬರ್ 2021 ಮತ್ತು ಅಕ್ಟೋಬರ್ 2022 ರ ನಡುವಿನ 52 ವಾರಗಳ ಅವಧಿಯಲ್ಲಿ ಸಂಗ್ರಹಿಸಿದ ಡೇಟಾವನ್ನು ಆಧರಿಸಿ ಈ ಶ್ರೇಯಾಂಕಗಳನ್ನು ನಿರ್ಧರಿಸಲಾಗಿದೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ