ಡೇಂಘಿಗೆ ಉತ್ತರ ಕನ್ನಡದಲ್ಲಿ ಮತ್ತೊಬ್ಬರು ಬಲಿ

ಮಂಗಳವಾರ, 24 ಅಕ್ಟೋಬರ್ 2023 (14:40 IST)
ಉತ್ತರ ಕನ್ನಡ ಜಿಲ್ಲೆಯಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗಿವೆ. ಅಲ್ಲದೆ ಇಂದು ಡೆಂಗ್ಯೂಗೆ ಮತ್ತೊಬ್ಬರು ಬಲಿಯಾಗಿದ್ದು ಇಡೀ ಜಿಲ್ಲೆಯಲ್ಲಿ ಆತಂಕ ಆವರಿಸಿದೆ. ಜಿಲ್ಲೆಯಲ್ಲಿ ಡೆಂಗ್ಯೂ ಜ್ವರಕ್ಕೆ ಎರಡನೇ ಬಲಿಯಾಗಿದೆ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಖಾಜಿಯಾ ಸ್ಟ್ರೀಟ್ ನಿವಾಸಿ ಮೊಹಮ್ಮದ್ ಮೀರಾನ್ ಸಾದಾ ಎಂಬುವವರು ಡೆಂಗ್ಯೂ ಜ್ವರಕ್ಕೆ ಪ್ರಾಣ ಕಳೆದುಕೊಂಡಿದ್ದಾರೆ.

ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೀರಾನ್, ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಪ್ರಾಣಬಿಟ್ಟಿದ್ದಾರೆ. ನಿನ್ನೆಯಷ್ಟೇ ಡೆಂಗ್ಯೂ ಜ್ವರಕ್ಕೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಮೊದಲ ಬಲಿಯಾಗಿದೆ ಎಂದು ವರದಿಯಾಗಿತ್ತು. ಇಂದು ಚಿಕತ್ಸೆ ಫಲಿಸದೆ ಮತ್ತೊಬ್ಬರು ಪ್ರಾಣ ಬಿಟ್ಟಿದ್ದಾರೆ. ನಿನ್ನೆ ಮಾವಿನಕುರ್ವ ಪಂಚಾಯ್ತಿ ವ್ಯಾಪ್ತಿಯ ತಲಗೋಡು ನಿವಾಸಿ ಪ್ರಜ್ವಲ್ ಗೋವಿಂದ ಕಾರ್ವಿ ಎಂಬ ಹದಿಹರೆಯದ ಯುವಕ ಡೆಂಗ್ಯೂಗೆ ಪ್ರಾಣ ಕಳೆದುಕೊಂಡಿದ್ದ. ಮೃತ ಗೋವಿಂದ ಸಾಗರಶ್ರೀ ಬೋಟ್‌ನಲ್ಲಿ ಮೀನುಗಾರನಾಗಿ ಕಾರ್ಯನಿರ್ವಹಿಸುತ್ತಿದ್ದ. ಕಳೆದ ಒಂದು ವಾರದಿಂದ ಗೋವಿಂದನಿಗೆ ಡೆಂಗ್ಯೂ ಜ್ವರ ಕಾಣಿಸಿಕೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಆದರೆ ಚಿಕಿತ್ಸೆ ಫಲಿಸದೇ ನಿನ್ನೆ ಮೃತಪಟ್ಟಿದ್ದಾನೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ