ಅನುಪಮಾ ಶೆಣೈ ರಾಜೀನಾಮೆ ನೀಡಿರುವುದು ಸರಿಯಲ್ಲ: ಎಸ್.ಆರ್.ಪಾಟೀಲ್
ಬುಧವಾರ, 8 ಜೂನ್ 2016 (11:18 IST)
ಕೂಡ್ಲಿಗಿ ಡಿವೈಎಸ್‌ಪಿ ಅನುಪಮಾ ಶೆಣೈ ಫೇಸ್‌ಬುಕ್ ಜಾಲತಾಣ ಮೂಲಕ ರಾಜೀನಾಮೆ ನೀಡಿರುವುದು ಸರಿಯಲ್ಲ ಎಂದು ಸಚಿವ ಎಸ್.ಆರ್.ಪಾಟೀಲ್ ಹೇಳಿದ್ದಾರೆ.
ಬಾಗಲಕೋಟೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಎಸ್.ಆರ್.ಪಾಟೀಲ್, ಕೂಡ್ಲಿಗಿ ಡಿವೈಎಸ್‌ಪಿ ಅನುಪಮಾ ಶೆಣೈ ಫೇಸ್‌ಬುಕ್ ಜಾಲತಾಣ ಮೂಲಕ ರಾಜೀನಾಮೆ ನೀಡಿರುವುದು ಸರಿಯಲ್ಲ, ದಕ್ಷ ಅಧಿಕಾರಿಯಾಗಿದ ಶೆಣೈ ಅವರು ಕರ್ತವ್ಯದಲ್ಲಿದ್ದು ಭ್ರಷ್ಟರನ್ನು ಸೆದೆಬಡಿಯಬಹುದಿತ್ತು. ಎಂದು ಹೇಳಿದ್ದಾರೆ.
ದಕ್ಷ ಅಧಿಕಾರಿಯಾಗಿರುವ ಅನುಪಮಾ ಶೆಣೈ ಅವರು ಸಾಮಾಜಿಕ ಜಾಲತಾಣ ಮೂಲಕ ರಾಜೀನಾಮೆ ನೀಡಿ ತೆರಳಿರುವುದು ತಪ್ಪು. ನಿಷ್ಠಾವಂತ ಅಧಿಕಾರಿಯಾಗಿ ಅವರು ಸೇವೆಯಲ್ಲಿದ್ದು ಯಾವುದೇ ಮುಲಾಜಿಲ್ಲದೆ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಾಗಿತ್ತು ಎಂದು ಸಚಿವ ಎಸ್.ಆರ್.ಪಾಟೀಲ್ ಹೇಳಿದ್ದಾರೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.