ಆ್ಯಪಲ್, ಸ್ಯಾಮಸಂಗ್ ಮೊಬೈಲ್ ನಕಲು ಮಾರಾಟ ಅಂಗಡಿಗಳ ಮೇಲೆ ದಾಳಿ

ಶುಕ್ರವಾರ, 21 ಡಿಸೆಂಬರ್ 2018 (12:02 IST)
ಆ್ಯಪಲ್ ಹಾಗೂ ಸ್ಯಾಮಸಂಗ್ ಮೊಬೈಲ್ ಗಳನ್ನ ನಕಲು ಮಾಡಿ ನಕಲಿ ಮೊಬೈಲ್ ಗಳನ್ನು ಮಾರಾಟ ಮಾಡುತ್ತಿರೋ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿದೆ.

ಆ್ಯಪಲ್ ಹಾಗೂ ಸ್ಯಾಮಸಂಗ್ ಕಂಪನಿ ಅಧಿಕಾರಿಗಳು ಹಾಗೂ ಪೊಲೀಸರಿಂದ ದಾಳಿ ನಡೆದಿದೆ.

ನಾಲ್ಕು ಅಂಗಡಿಗಳ ಮೇಲೆ ದಾಳಿ ನಡೆಸಲಾಗಿದೆ. ಹುಬ್ಬಳ್ಳಿಯ ಹರ್ಷಾ ಕಾಂಪ್ಲೆಕ್ಸ್ ಮೇಲೆ ದಾಳಿ ನಡೆದಿದ್ದು, ರೈಲ್ವೇ ಸ್ಟೇಷನ್ ರಸ್ತೆಯಲ್ಲಿರೋ ಹರ್ಷಾ ಕಾಂಪ್ಲೆಕ್ಸ್ ನಲ್ಲಿನ ಮೊಬೈಲ್ ಶೋರೂಂ ಹಾಗೂ ಬಿಡಿ ಭಾಗಗಳ ಮಾರಾಟ ಮಳಿಗೆಗಳನ್ನ ಹೊಂದಿರೋ ಕಾಂಪ್ಲೆಕ್ಸ್ನಲ್ಲಿ ದಾಳಿ ಮಾಡಲಾಗಿದೆ.

ಆ್ಯಪಲ್ ಹಾಗೂ ಸ್ಯಾಮಸಂಗ್ ಮೊಬೈಲ್ ಗಳನ್ನ ನಕಲು ಮಾರಾಟ ಮಾಡುತ್ತಿರೋ ಮಾಹಿತಿ ಮೇರೆಗೆ ದಾಳಿ ಮಾಡಿದ್ದು, ಸ್ಥಳೀಯ ಪೊಲೀಸರ ಸಹಾಯದೊಂದಿಗೆ ಕಂಪನಿಗಳ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ಕುರಿತು ಹುಬ್ಬಳ್ಳಿಯ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ