ಖಾಲಿಯಿರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಬುಧವಾರ, 27 ಮೇ 2020 (17:21 IST)
ಖಾಲಿಯಿರುವ ವಿವಿಧ ಹುದ್ದೆಗಳ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಕಲಬುರಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಡಿ ಬರುವ ಸರ್ಕಾರಿ ಪಾಲನಾ ಸಂಸ್ಥೆಗಳಲ್ಲಿ ಖಾಲಿಯಿರುವ ಅರೆಕಾಲಿಕ ಭೋದಕ, ಬೋಧಕೇತರ ಹಾಗೂ ಅರೆಕಾಲಿಕ ವೈದ್ಯರ ಹುದ್ದೆಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.

ಅರೆಕಾಲಿಕ ಇಂಗ್ಲೀಷ ಬೋಧಕರು-02 ಹುದ್ದೆ ಹಾಗೂ ವಿಜ್ಞಾನ ಮತ್ತು ಗಣಿತ ಬೋಧಕರು-02 ಹುದ್ದೆಗಳಿಗೆ ಬಿ.ಎಡ್. ದೊಂದಿಗೆ ವಿಶೇಷ ಮಕ್ಕಳ ಪಾಲನಾ ಗೃಹದಲ್ಲಿ ಮಕ್ಕಳಿಗೆ ಶಿಕ್ಷಣ ನೀಡಲು ಅನುಭವ ಹೊಂದಿರಬೇಕು. ಯೋಗಾ, ದೈಹಿಕ ಶಿಕ್ಷಕರು-03 ಹುದ್ದೆಗಳಿಗೆ ದೈಹಿಕ ಶಿಕ್ಷಣದಲ್ಲಿ ಡಿಪ್ಲೋಮಾ ಪಾಸಾಗಿರಬೇಕು.

ಸಂಗೀತ/ಕ್ರಾಫ್ಟ್ ಶಿಕ್ಷಕರು-02 ಹುದ್ದೆಗಳಿಗೆ ಸಂಗೀತ, ವಾದ್ಯ ಹಾಗೂ ಕಲೆ ವಿಷಯದಲ್ಲಿ ಅಂಗೀಕೃತ ಸಂಸ್ಥೆಯಿಂದ ಸರ್ಟೀಫೈಡ್ ಕೋರ್ಸ್ ಪಾಸಾಗಿರಬೇಕು. ಎಜ್ಯುಕೇಟರ್ 3 ಹುದ್ದೆಗಳಿಗೆ ಡಿ.ಎಡ್. ದೊಂದಿಗೆ ವಿಶೇಷ ಮಕ್ಕಳ ಪಾಲನಾ ಗೃಹಗಳಲ್ಲಿ ಮಕ್ಕಳ ಶಿಕ್ಷಣ ನೀಡಲು ಅರ್ಹರಾಗಿರಬೇಕಲ್ಲದೇ ಅನುಭವ ಹೊಂದಿರಬೇಕು. ಅರೆಕಾಲಿಕ ವೈದ್ಯರು-3 ಹುದ್ದೆಗಳಿಗೆ ಎಂ.ಬಿ.ಬಿ.ಎಸ್. ಪಾಸಾಗಿರಬೇಕು.

ಈ ಹುದ್ದೆಗಳು ತಾತ್ಕಾಲಿಕವಾಗಿದ್ದು, ಒಂದು ವರ್ಷಕ್ಕೆ ಮಾತ್ರ ಅನ್ವಯವಾಗುತ್ತದೆ.  ಅರ್ಹ ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿಗಳನ್ನು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಸರ್ಕಾರಿ ವೀಕ್ಷರ್ಣಾಲಯ, ಮೊದಲನೇ ಮಹಡಿ, ಚಂದ್ರಶೇಖರ ಕ್ರೀಡಾಂಗಣದ ಎದುರಿಗೆ, ಕಲಬುರಗಿ ಕಚೇರಿಯಲ್ಲಿ  2020 ಜೂನ್ 4 ರ ಸಂಜೆ 5.30 ಗಂಟೆಯೊಳಗಾಗಿ ಸಲ್ಲಿಸಬೇಕು.

ಅಭ್ಯರ್ಥಿಗಳು ನಿಗದಿಪಡಿಸಿದ ಗೌರವಧನ ಹಾಗೂ ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಚೇರಿಯನ್ನು ಹಾಗೂ ಕಚೇರಿ ದೂರವಾಣಿ ಸಂಖ್ಯೆ 08472-243219ಗೆ ಸಂಪರ್ಕಿಸಬಹುದು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ