ನಕಲಿ ಎನ್ ಒ ಸಿ ಸೃಷ್ಟಿಸಿ ಕಾರು ಮಾರಾಟ ಮಾಡ್ತಿದ್ದ ಆರೋಪಿಗಳ ಬಂಧನ

ಶುಕ್ರವಾರ, 23 ಡಿಸೆಂಬರ್ 2022 (20:23 IST)
ನಕಲಿ ಎನ್ ಒ‌ಸಿ ಸೃಷ್ಟಿಸಿ ಕಾರು ಮಾರಾಟ ಮಾಡ್ತಿದ್ದ ಆರೋಪಿಗಳನ್ನ ಬಂಧನ ಮಾಡಲಾಗಿದ್ದು,ಪ್ರಭಾಕರ್ , ಪ್ರಕಾಶ್@ ಚೀಟಿ,ಕಿರಣ್ ಬಂಧಿತ ಆರೋಪಿಗಳು .ಆರೋಪಿಗಳಿಂದ 90 ಲಕ್ಷ ಮೌಲ್ಯದ ಮಾರುತಿ ಸಿಯಾಝ್ ,ಫಾರ್ಚುನರ್ , ಇನ್ನೋವಾ , ಟೆಂಪೋ ಟ್ರಾವೆಲರ್ , ಹುಂಡೈ ಐ20 ಸೇರಿ ಏಳು ಕಾರುಗಳನ್ನ ವಶಕ್ಕೆ ಪಡೆಯಲಾಗಿದೆ.ಲೋನ್ ಮುಗಿದ ವಾಹನಗಳಿಗೆ ನಕಲಿ ಎನ್ ಒ ಸಿ ಯನ್ನ ಆರೋಪಿಗಳು ಸೃಷ್ಟಿಸುತ್ತಿದ್ದರು.ಕೆನರಾ ಬ್ಯಾಂಕ್ , ಹೆಚ್ ಡಿ ಎಫ್ ಸಿ , ಚೋಳಮಂಡಲಂ ಸೇರಿ ಹಲವು ಬ್ಯಾಂಕ್ ಗಳ ನಕಲಿ ಎನ್ ಒ ಸಿ ಸೃಷ್ಟಿಸಿ ವಾಹನಗಳ ಮಾರಾಟ ಮಾಡ್ತಿದ್ರು.ವಾಹನಗಳ ಮಾಲೀಕರ ಜೊತೆ ಶಾಮೀಲಾಗಿ ಆರೋಪಿಗಳು ವಂಚನೆ ಮಾಡ್ತಿದ್ದು,ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ