ಬೆಂಗಳೂರು : ಮಂಗಳೂರಿನಲ್ಲಿ ತಾಂಬೂಲ ಪ್ರಶ್ನೆ ಇಡಲಾಗಿದೆ. ಇದೊಂದು ಭಾವನಾತ್ಮಕ ವಿಚಾರ ಅದನ್ನು ಬಿಜೆಪಿ ನಾಯಕರು ಅವರ ಮನೆಯಲ್ಲಿ ಇಟ್ಟುಕೊಳ್ಳಲಿ.
ಈ ಬಗ್ಗೆ ಸರ್ಕಾರ ಮಧ್ಯಪ್ರವೇಶ ಮಾಡ್ಬೇಕು ಎಂದು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಆಗ್ರಹಿಸಿದ್ದಾರೆ. ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅವರಿಗೆ ಏನೇನ್ ನಂಬಿಕೆ ಇದೆಯೋ? ಏನ್ ಬೇಕಾದ್ರೂ ಮಾಡಿಕೊಳ್ಳಲಿ. ನಾವು ಮಧ್ಯಪ್ರವೇಶ ಮಾಡಲ್ಲ. ಬಿಜೆಪಿ ನಾಯಕರು ರಾಜ್ಯವನ್ನು ಸಾಯಿಸ್ತಿದ್ದಾರೆ.
ಅವರ ಸ್ವಂತಕ್ಕೆ, ಮನೆಗೆ ಏನ್ ಬೇಕಾದ್ರೂ ಮಾಡಲಿ. ಆದರೆ ಇಲ್ಲಿ ಸರ್ಕಾರ ಇದೆ, ಅಲ್ಪಸಂಖ್ಯಾತ ಇಲಾಖೆ ಇದೆ, ಮುಜರಾಯಿ ಇಲಾಖೆಯೂ ಇದೆ, ಕ್ಯಾಬಿನೆಟ್ ಇದೆ, ಸರ್ಕಾರಿ ಅಧಿಕಾರಿಗಳು ಇದ್ದಾರೆ. ಆದ್ರೆ ಖಾಸಗಿಯಾಗಿ ಹೀಗೆ ಮಾಡಬಾರದು. ಅವರ ವಿರುದ್ಧ ಕೇಸ್ ಹಾಕಬೇಕು. ಜಿಲ್ಲಾಧಿಕಾರಿ ಮತ್ತು ಎಸ್ಪಿ ಮಧ್ಯಪ್ರವೇಶ ಮಾಡ್ಬೇಕು ಎಂದು ಗುಡುಗಿದ್ದಾರೆ.
ನನಗೂ ಈ ಬಗ್ಗೆ ಕಾಲ್ ಬಂದಿತ್ತು. ನಮ್ ಪಾರ್ಟಿಗೂ ಅದಕ್ಕೂ ಸಂಬಂಧ ಇಲ್ಲ, ಮರ್ಯಾದೆಯಾಗಿ ಸುಮ್ಮನೆ ಇರಿ ಅಂದೆ. ಭವಿಷ್ಯ ಕೇಳೋರು, ಶಕುನ ಕೇಳೋರಿಗೆ ನಾವು ಅಡ್ಡಿ ಮಾಡಲ್ಲ. ಅವರು ಏನ್ ಬೇಕಾದ್ರೂ ಮಾಡಿಕೊಳ್ಳಲಿ, ಆದ್ರೆ ಮಂಗಳೂರಿನ ವಿಚಾರವಾಗಿ ಸರ್ಕಾರ ಮಧ್ಯಪ್ರವೇಶ ಮಾಡಬೇಕು.