ಮಾತು ಮರೆತಿದ್ದೀರಿ: ಬಿಜೆಪಿ ನಾಯಕರಿಗೆ ಬಹಿರಂಗ ಎಚ್ಚರಿಕೆ ಕೊಟ್ಟ ಅರುಣ್ ಕುಮಾರ್ ಪುತ್ತಿಲ

Krishnaveni K

ಗುರುವಾರ, 11 ಸೆಪ್ಟಂಬರ್ 2025 (16:29 IST)
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ಅರುಣ್ ಕುಮಾರ್ ಪುತ್ತಿಲ ಬಿಜೆಪಿಗೆ ಮುಳ್ಳಾಗುವ ಸೂಚನೆಯಿದೆ. ಅಂದು ಕೊಟ್ಟ ಮಾತು ಮರೆತಿದ್ದೀರಿ ಎಂದು ಪುತ್ತಿಲ ಬಹಿರಂಗವಾಗಿಯೇ ಬಿಜೆಪಿ ನಾಯಕರಿಗೆ ಎಚ್ಚರಿಕೆ ಕೊಟ್ಟಿದ್ದಾರೆ.

ಈ ಹಿಂದೆ ವಿಧಾನಸಭೆ ಚುನಾವಣೆ ವೇಳೆ ಅರುಣ್ ಕುಮಾರ್ ಪುತ್ತಿಲಗೆ ಜನ ಬೆಂಬಲವಿದ್ದರೂ ಟಿಕೆಟ್ ಕೊಡದೇ ಬಿಜೆಪಿ ನಾಯಕರು ಕೈ ಸುಟ್ಟುಕೊಂಡಿದ್ದರು. ಮತ್ತೆ ಲೋಕಸಭೆ ಚುನಾವಣೆ ವೇಳೆ ಮತ್ತೊಮ್ಮೆ ಅರುಣ್ ಕುಮಾರ್ ಪುತ್ತಿಲ ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲಲು ಹೊರಟಾಗ ಬಿಜೆಪಿ ಅವರ ಮನವೊಲಿಸಿ ಸುಮ್ಮನಾಗಿಸಿತ್ತು.

ಪುತ್ತಿಲ ಪರಿವಾರ ಕೊನೆಗೆ ಬಿಜೆಪಿ ಜೊತೆ ವಿಲೀನವಾಗಿತ್ತು. ಆದರೆ ಅಗ ಪುತ್ತಿಲ ಕೆಲವೊಂದು ಷರತ್ತುಗಳನ್ನು ವಿಧಿಸಿದ್ದರು. ಆದರೆ ಅದು ಇದುವರೆಗೆ ಈಡೇರಿಲ್ಲ ಎನ್ನುವುದು ಅವರ ಆಕ್ರೋಶಕ್ಕೆ ಕಾರಣವಾಗಿದೆ.

ಹೀಗಾಗಿ ತಮ್ಮ ಬೆಂಬಲಿಗರೊಡನೆ ಸಭೆ ನಡೆಸಿದ ಬಳಿಕ ಬಹಿರಂಗ ಎಚ್ಚರಿಕೆ ನೀಡಿರುವ ಅವರು ‘ನಾಯಕರು ಎಚ್ಚೆತ್ತುಕೊಂಡರೆ ಒಳಿತು. ಇಲ್ಲದಿದ್ದರೆ ಮುಂದೆ ಡ್ಯಾಮೇಜ್ ಕಂಟ್ರೋಲ್ ಮಾಡಲು ಪರದಾಡಬೇಕಾದ ಪರಿಸ್ಥಿತಿ ಬರಬಹುದು. ಮತ್ತೆ ಮೊದ್ಲಿನ ರೀತಿಯೇ ಅವ ಅರುಣ ಯಾರು ಅವನೊಂದಿಗಿರುವವರು ನಾಲ್ಕು ಜನ ವೋಟ್ ಹಾಕ್ಯಾರು ಎಂದು ಕಳೆದ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಹೇಳಿಕೊಂಡು ಹೋಗಿ ನಾಚಿಗೆ ಕೆ್ಟ ಹಾಗೆ ಆಗಬಹುದು’ ಎಂದು ಎಚ್ಚರಿಕೆ ನೀಡಿದ್ದಾರೆ. ಇದೀಗ ಅರುಣ್ ಕುಮಾರ್ ಪುತ್ತಿಲ ಪರಿವಾರಕ್ಕೆ ಬಿಜೆಪಿ ಸೂಕ್ತ ಸ್ಥಾನ ಮಾನ ನೀಡುತ್ತಾ ಕಾದು ನೋಡಬೇಕಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ