ಸಾಹಿರಾಮ್ ಪಹಲ್ವಾನ್ ಪರ ರೋಡ್ ಶೋ ನಡೆಸಿದ ಅರವಿಂದ್ ಕೇಜ್ರಿವಾಲ್

Sampriya

ಶನಿವಾರ, 11 ಮೇ 2024 (19:35 IST)
ನವದೆಹಲಿ: ದೆಹಲಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರೊಂದಿಗೆ ಶನಿವಾರ ಮೆಹ್ರೌಲಿಯಲ್ಲಿ ರೋಡ್ ಶೋ ನಡೆಸಿದರು.

ಕೇಜ್ರಿವಾಲ್ ಅವರು ಜೈಲಿಂದ್ದ ಹೊರಬಂದ್ಮೇಲೆ ಮೊದಲ ಬಾರಿ ಆಪ್ ದಕ್ಷಿಣ ದೆಹಲಿ ಲೋಕಸಭಾ ಅಭ್ಯರ್ಥಿ ಸಾಹಿರಾಮ್ ಪಹಲ್ವಾನ್ ಪರ ನಾಯಕರು ರೋಡ್ ಶೋ ನಡೆಸಿದರು.

ದೆಹಲಿ ಮುಖ್ಯಮಂತ್ರಿ ಜನಸಮೂಹದತ್ತ ಕೈಬೀಸುತ್ತಿದ್ದಂತೆ ರ್ಯಾಲಿಯಲ್ಲಿ ಸಾವಿರಾರು ಪ್ರೇಕ್ಷಕರು ಜಮಾಯಿಸಿದ್ದರು. ರಸ್ತೆಯೂದ್ದಕ್ಕೂ ಎಎಪಿ ಧ್ವಜಗಳಿಂದ ಅಲಂಕರಿಸಲಾಗಿತ್ತು ಮತ್ತು ಪಕ್ಷದ ಸಾವಿರಾರು ಕಾರ್ಯಕರ್ತರು ಮತ್ತು ಬೆಂಬಲಿಗರು ಮುಖಂಡರನ್ನು ಹುರಿದುಂಬಿಸಿದರು ಮತ್ತು ಅವರನ್ನು ಸ್ವಾಗತಿಸಿದರು.

ಆಮ್ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಸಂಚಾಲಕ ಕೇಜ್ರಿವಾಲ್ ಅವರು ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನಿಂದ ಜೂನ್ 1 ರವರೆಗೆ ಮಧ್ಯಂತರ ಜಾಮೀನು ಪಡೆದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ