ಬಿಜೆಪಿ ಶಕ್ತಿಯುತವಾಗಿದೆ ಎಂದು ಕಾಂಗ್ರೆಸ್ ಗೆ ಟಾಂಗ್‌ ನೀಡಿದ ಅಶ್ವಥ್ ನಾರಾಯಣ್

ಶನಿವಾರ, 9 ಸೆಪ್ಟಂಬರ್ 2023 (13:14 IST)
ರೊಟ್ಟಿ‌ ಹಳಸಿತ್ತು,ನಾಯಿ ಹಸಿದಿತ್ತು ಎಂಬ ಕಾಂಗ್ರೆಸ್ ಟೀಕೆ ವಿಚಾರವಾಗಿ ಅಶ್ವಥ್ ನಾರಾಯಣ್‌ ಪ್ರತಿಕ್ರಿಯಿಸಿದ್ದು.ಅದೇನೆ ಇದ್ರೂ ಕಾಂಗ್ರೆಸ್‌ನವರಿಗೆ ಅನ್ವಯಿಸುತ್ತದೆ.ಆ ಪರಿಸ್ಥಿತಿ ಕಾಂಗ್ರೆಸ್‌ಗೆ ಬಂದಿದೆ.ಬಿಜೆಪಿ ಶಕ್ತಿಯುತವಾಗಿದೆ.ಕಾಂಗ್ರೆಸ್ ಪಕ್ಷ ಅಸ್ತಿತ್ವವನ್ನೆ ಕಳೆದುಕೊಂಡಿದೆ.ಶಿವಸೇನಾ,ಆಮ್ ಆದ್ಮಿ ಪಕ್ಷವನ್ನು ಕಾಂಗ್ರೆಸ್ ಬಿಡಲ್ಲ.ಕಾಂಗ್ರೆಸ್ ಎಲ್ಲಿ ಬೇಕಾದ್ರೂ ಹೋಗಿ ಕಾಡಿ ಬೇಡಿ ತಮ್ಮ ಅಸ್ತಿತ್ವ ಉಳಿಸಿಕೊಳ್ಳುವ ಪರಿಸ್ಥಿತಿಯಿದೆ.ಜೆಡಿಎಸ್,ಬಿಜೆಪಿ ಕಾಂಗ್ರೆಸ್ ಪಕ್ಷದ ವಿರುದ್ಧವೇ ಪ್ರಾರಂಭವಾಗಿರುವ ಪಕ್ಷ.ಎರಡು ಪಕ್ಷಗಳು ಕಾಂಗ್ರೆಸ್‌ನ ಸ್ವಾಭಾವಿಕ ಎದುರಾಳಿಗಳು.ಜೆಡಿಎಸ್ ಮತದಾರರು ಕಾಂಗ್ರೆಸ್ ವಿರೋಧಿ ಮತದಾರರು.ಮುಂದೆ ಯಾವ ರೀತಿ ಮತ ಸ್ವಿಂಗ್ ಆಗುತ್ತೆ ಏನೇನು ಅಂತ ಹೇಳ್ತೀನಿ ಎಂದು ಅಶ್ವಥ್ ನಾರಾಯಣ್ ಹೇಳಿದ್ದಾರೆ.
 
ಅಲ್ಲದೇ G20 ಸಭೆಗೆ ಸಿಎಂ ಸಿದ್ದರಾಮಯ್ಯ, ಖರ್ಗೆ ಗೈರು ವಿಚಾರವಾಗಿ ಇಡೀ ವಿಶ್ವಮಟ್ಟದ ನಾಯಕರು ಬಂದಾಗ ಒಂದೆ ದೇಶ,ಒಂದೇ ಭೂಮಿ ಅಂತ ಮಾತನಾಡಬೇಕಿತ್ತು.ಇದು ಸಿದ್ದರಾಮಯ್ಯ ವೈಯಕ್ತಿಕ ವಿಚಾರ ಅಲ್ಲ.ಕರ್ನಾಟಕ ಇವರ ಮನೆ ಆಸ್ತಿ ಅಲ್ಲ.ಸಾರ್ವಜನಿಕ ಪ್ರತಿನಿಧಿಯಾಗಿ ರಾಜ್ಯದ ಹಿತ ಕಾಪಾಡೋಕೆ ಕೆಲಸ ಮಾಡಬೇಕು.ಜವಾಬ್ದಾರಿಯಿಂದ ನಡೆದುಕೊಳ್ಳುವ ಕೆಲಸ ಮಾಡಬೇಕು.ವೈಯಕ್ತಿಕ ಪ್ರತಿಷ್ಠೆ ತೋರಿಸಿ ರಾಜಕೀಯ ಬೆರೆಸಿ ಇಂತಹ ಕೆಲಸ ಮಾಡ್ತಿದ್ದಾರೆ.ನೀವು ಜೀವಮಾನದಲ್ಲಿ ಇಂತಹ ಒಂದು ಕಾರ್ಯಕ್ರಮ ಮಾಡಿ.ನಿಮ್ಮ ಪಕ್ಷದಲ್ಲಿ ಹತ್ತಾರು ಸಿಎಂಗಳಿದ್ದಾರೆ.ನಿಮ್ಮ ಜೀವನದಲ್ಲಿ ಇಂತಹ ಒಂದು ಕಾರ್ಯಕ್ರಮ ಮಾಡಿ ತೋರಿಸಿ.ಕರ್ನಾಟಕಕ್ಕೂ ಅವಮಾನ ಮಾಡಬೇಡಿ.ಕರ್ನಾಟಕದ ಶಕ್ತಿ ಬಿಂಬಿಸಿಕೊಳ್ಳೋ ಕೆಲಸ ಮಾಡಬೇಕು ಎಂದು ಅಶ್ವಥ್ ನಾರಾಯಣ್ ಟಾಂಗ್ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ