ಡಿಕೆ ಶಿವಕುಮಾರ್ ವಿರುದ್ಧ ಕೆಂಡಕಾರಿದ ಅಶ್ವತ್ ನಾರಾಯಣ

ಮಂಗಳವಾರ, 6 ಜೂನ್ 2023 (19:19 IST)
ಅಧಿಕಾರಕ್ಕೆ‌ ಬಂದ ನಂತರ ಸರ್ಕಾರ ಬೆಲೆ‌ ಏರಿಕೆ ಮಾಡಿದೆ. ಕರಂಟ್ ಬೆಲೆ ಯನ್ನ ಹೆಚ್ಚಳ ಮಾಡಿದ್ದಾರೆ.ಗ್ಯಾರಂಟಿ ಕೊಡ್ತೀವಿ ಎಂದು ಜನರಿಗೆ ಮೋಸ ಮಾಡಿದ್ದಾರೆ ಎಂದು ಡಿಕೆ ಶಿವಕುಮಾರ್ ವಿರುದ್ಧ  ಅಶ್ವತ್ ನಾರಾಯಣ ಕೆಂಡಮಂಡಲರಾಗಿದ್ದಾರೆ. ಇಂಧನ ಸಚಿವರಾಗಿದ್ದಾಗ ಡಿಕೆ ಶಿವಕುಮಾರ್ ಸೋಲಾರ್ ಪ್ಲಾಂಟ್ ಅನ್ನು ಹರಾಜಿಗೆ ಹಾಕಿದ್ದರು.ಅದರಿಂದಲೇ ಇಂದು ವಿದ್ಯುತ್ ಬೆಲೆ ಹೆಚ್ಚಳವಾಗಿದೆ.ಸಾಂಕೇತಿಕವಾಗಿ ನಾವು ಇವತ್ತು ಪ್ರತಿಭಟನೆ ಮಾಡಿದ್ದೇವೆ.ಒಳ್ಳೆ ಆಡಳಿತ ಕೊಡಬೇಕು.ಜೈಲಿಗೆ ಹಾಕ್ತೇನೆ ಎನ್ನುವುದಕ್ಕೆ ನೀವೇನು ಜಡ್ಜ್ ಗಳಾ ?ದ್ವೇಷದ ರಾಜಕಾರಣ ಮಾಡೊದನ್ನ‌ ನಿಲ್ಲಿಸಿ.ಅಧಿಕಾರದ ಅಮಲಿನಿಂದ ಇಳಿದು ಜನಪರ ಕೆಲಸ ಮಾಡಿ.ಗೋಹತ್ಯೆ ನೀಷೇಧವನ್ನ ಹಿಂಪಡೆಯುವ ಕೆಲಸಕ್ಕೆ ಕೈ ಹಾಕ್ಬೇಡಿ ಎಂದು ಅಶ್ವಥ್ ನಾರಾಯಣ ವಾಗ್ದಾಳಿ ನಡೆಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ