ತಾಜ್ ಮಹಲ್ ಒಂದು ಸಮಾಧಿ, ದೇಗುಲವಲ್ಲ: ಆಗ್ರಾ ಕೋರ್ಟ್`ಗೆ ಎಎಸ್`ಐ ಲಿಖಿತ ಹೇಳಿಕೆ

ಶನಿವಾರ, 26 ಆಗಸ್ಟ್ 2017 (13:00 IST)
ತಾಜ್ ಮಹಲ್ ಇಸ್ಲಾಂ ವಾಸ್ತುಶಿಲ್ಪದ ಮೇರುಕೃತಿ. ಅದೊಂದು ಸಮಾಧಿ, ದೇವಾಲಯವಲ್ಲ ಎಂದು ಭಾರತೀಯ ಪುರಾತತ್ವ ಇಲಾಖೆ ಆಗ್ರಾ ಕೋರ್ಟ್`ಗೆ ತಿಳಿಸಿದೆ.

ಈ ಬಗ್ಗೆ ಸಿವಿಲ್ ನ್ಯಾಯಾಲಯಕ್ಕೆ ಲಿಖಿತ ಹೇಳಿಕೆ ಸಲ್ಲಿಸಿರುವ ಇಲಾಖೆ, ತಾಜ್ ಮಹಲ್ ಶಿವನಿಗಾಗಿ ನಿರ್ಮಿಸಿದ್ದ ತೇಜೋಮಹಾಲಯ ಎಂದು ವಕೀಲರ ತಂಡ ಮಂಡಿಸಿದ್ದ ವಾದವನ್ನ ತಳ್ಳಿ ಹಾಕಿದೆ. ತಾಜ್ ಮಹಲ್ ಹಿಂದೂ ದೇಗುಲ, ಹಿಂದೂಗಳು ಒಳಾಂಗಣ ಪ್ರವೇಶಿಸಲು, ಪೂಜೆ ಪುನಸ್ಕಾರ ನಡೆಸಲು ಅವಕಾಶ ನೀಡಬೇಕೆಂದು ಏಪ್ರಿಲ್ 2015ರಂದು 6 ವಕೀಲರು ಸಲ್ಲಿಸಿದ್ದ ಅರ್ಜಿಯನ್ನ ಕೋರ್ಟ್ ವಿಚಾರಣೆಗೆ ಅಂಗೀಕರಿಸಿತ್ತು.

ಇದರ ಜೊತೆಗೆ ತಾಜ್ ಮಹಲ್`ನಲ್ಲಿ ಮುಚ್ಚಲಾಗಿರುವ ಬಾಗಿಲುಗಳನ್ನೂ ತೆರೆಯಲು ವಕೀಲರ ತಂಡ ಮನವಿ ಮಾಡಿತ್ತು. ಪುರಾತತ್ವ ಸರ್ವೆ ಅಧಿಕಾರಿಗಳ ಹೇಳಿಕೆ ಆಲಿಸಿದ ಕೋರ್ಟ್ ಸೆಪ್ಟೆಂಬರ್ 11ಕ್ಕೆ ವಿಚಾರಣೆ ಮುಂದೂಡಿದೆ.
2015ರಲ್ಲಿ ವಕೀಲರ ತಂಡದ ಅರ್ಜಿ ಆಧರಿಸಿದ ಕೋರ್ಟ್, ಕೇಂದ್ರ ಸರ್ಕಾರ, ಸಂಸ್ಕೃತಿ ಸಚಿವಾಲಯ, ಗೃಹ ಕಾರ್ಯದರ್ಶಿ ಮತ್ತು ಪುರಾತತ್ವ ಸಮೀಕ್ಷಾಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿತ್ತು.  ಈ ಮಧ್ಯೆ, ಪುರಾತತ್ವ ಸಂಶೋಧನೆ ಮತ್ತು ದೇಶದಲ್ಲಿನ ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆಯ ಹೊಣೆ ಹೊತ್ತಿರುವ ಭಾರತೀಯ ಪುರಾತತ್ವ ಸರ್ವೆ ಅಧಿಕಾರಿಗಳು ಕೋರ್ಟ್`ಗೆ ಲಿಖಿತ ಹೇಳಿಕೆ ನೀಡಿದ್ಧಾರೆ. .

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ