ವಿಧಾನಸಭೆಯಲ್ಲಿ ಡೈರಿ ಗಲಾಟೆ: ಕಲಾಪ ಮುಂದೂಡಿಕೆ

ಗುರುವಾರ, 16 ಮಾರ್ಚ್ 2017 (13:15 IST)
ಸದನದಲ್ಲಿ ಡೈರಿ ವಿಷಯಕ್ಕೆ ಸಂಬಂಧಿಸಿದಂತೆ ಚರ್ಚೆಯಾಗಬೇಕು ಎಂದು ವಿಪಕ್ಷಗಳು ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಕೋಲಾಹಲ ಸೃಷ್ಟಿಯಾಗಿ ಸದನವನ್ನು ಮುಂದೂಡಲಾಗಿದೆ.
 
ಡೈರಿ ವಿವಾದದ ಬಗ್ಗೆ ನಿಯಮ 60ರ ಅಡಿ ಮೊದಲು ಚರ್ಚೆಗೆ ಅವಕಾಶ ನೀಡಬೇಕು ಎಂದು ಪ್ರತಿಪಕ್ಷಗಳು ಪಟ್ಟು ಹಿಡಿದಿದ್ದವು. ಆದರೆ. ಯಾವುದೇ ಕಾರಣಕ್ಕೂ ಚರ್ಚೆಗೆ ಅವಕಾಶ ಕೊಡುವುದಿಲ್ಲ ಎಂದು ಸ್ಪೀಕರ್ ಕೋಳಿವಾಡ ತಿರಸ್ಕರಿಸಿದ್ದರಿಂದ ಸದನದಲ್ಲಿ ಭಾರಿ ಗದ್ದಲ ಸೃಷ್ಟಿಯಾಯಿತು.
 
ಸದಸ್ಯರು ಶಾಂತಿಯಿಂದ ವರ್ತಿಸಬೇಕು ಎನ್ನುವ ಸ್ವೀಕರ್ ಕೋಳಿವಾಡ್ ಮನವಿಗೆ ವಿಪಕ್ಷಗಳ ಮುಖಂಡರು ಕಿವಿಗೊಡದಿದ್ದರಿಂದ ಸದನವನ್ನು ಮೂರು ಗಂಟೆಯವರೆಗೆ ಮುಂದೂಡಿದ್ದಾರೆ.
 
ಕಾಂಗ್ರೆಸ್ ಸರಕಾರ ಹೈಕಮಾಂಡ್‌ಗೆ ಒಂದು ಸಾವಿರ ಕೋಟಿ ರೂಪಾಯಿ ಹಣ ಸಂದಾಯ ಮಾಡಿದೆ. ಸ್ಟೀಲ್ ಬ್ರಿಡ್ಜ್ ಯೋಜನೆಯಲ್ಲಿ ಸಿಎಂ ಕುಟುಂಬ 67 ಕೋಟಿ ರೂ ಹಣ ಪಡೆದಿದೆ ಎನ್ನುವ ಆರೋಪಗಳು ಡೈರಿಯಲ್ಲಿವೆ ಎನ್ನುವುದು ಬಿಜೆಪಿ ನಾಯಕರ ಆರೋಪವಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ