ಕಾಂಗ್ರೆಸ್ ಸರ್ಕಾರ ಕೊಟ್ಟು ಮಾತು ತಪ್ಪಿದೆ- ಅಶ್ವಥ್ ನಾರಾಯಣ್

ಭಾನುವಾರ, 2 ಜುಲೈ 2023 (15:01 IST)
ಬಿಜೆಪಿ ಕಛೇರಿಯಲ್ಲಿ ಮಾಜಿ ಡಿಸಿಎಂ ಡಾ. ಅಶ್ವಥ್ ನಾರಾಯಣ್ ಸುದ್ದಿಗೊಷ್ಟಿ ನಡೆಸಿದ್ರು.ಸುದ್ದಿಗೊಷ್ಟಿಯಲ್ಲಿ ಶಾಸಕ ಮಹೇಶ್ ಟೆಂಗಿನಕಾಯಿ ಹಾಗೂ ಎನ್.ರವಿಕುಮಾರ್ ಭಾಗಿಯಾಗಿದ್ರು.ಈ ವೇಳೆ ಮಾತನಾಡಿದ ಡಿಸಿಎಂ ಡಾ.ಅಶ್ವಥ್ ನಾರಾಯಣ್ ಗ್ಯಾರಂಟಿ ಆಧಾರದ ಮೇಲೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ.ಅಧಿಕಾರಕ್ಕೆ ಬಂದ ಕೂಡಲೇ ಗ್ಯಾರಂಟಿ ಜಾರಿ ಮಾಡ್ತಿವಿ ಎಂದು ಹೇಳಿದ್ರು.ಈಗ ಕಾಂಗ್ರೆಸ್ ಸರ್ಕಾರ ಕೊಟ್ಟು ಮಾತು ತಪ್ಪಿದೆ.ಹಾಗಾಗಿ ಬಿಜೆಪಿ ಸದನದ ಹೊರಗಡೆ ಮತ್ತು ಒಳಗಡೆ ಹೊರಟ ಮಾಡಲಿದೆ.ಸದನದ ಹೊರಗಡೆ ಮಾಜಿ ಸಿಎಂ ಯಡಿಯೂರಪ್ಪ ಅವರು ಹೊರಾಟ ಮಾಡಲಿದ್ದಾರೆ.ಯಡಿಯೂರಪ್ಪ ಅವರು ಫ್ರೀಡಂ ಪಾರ್ಕ್ ನಲ್ಲಿ ಜುಲೈ 4 ರಂದು ಪ್ರತಿಭಟನೆ ಮಾಡಲಿದ್ದಾರೆ ಎಂದು ಸಚಿವ ಅಶ್ವಥ್ ‌ನಾರಾಯಾ
ಣ್ ಹೇಳಿದ್ರು
 
ಅಲ್ಲದೇ ಯಾವುದೇ ಕಂಡಿಷನ್ ಇಲ್ಲದೇ ಗ್ಯಾರಂಟಿ ಕೊಡ್ತಿವಿ ಎಂದು ಕಾಂಗ್ರೆಸ್ ಹೇಳ್ತಿದ್ರು.ಈವಾಗ ಕಂಡಿಷನ್ ಹಾಕ್ತಿದ್ದಾರೆ.10 ಕೆಜಿ ಅಕ್ಕಿಯನ್ನು ಕಾಂಗ್ರೆಸ್ ಸರ್ಕಾರ ಕೊಡಬೇಕು.ಕೇಂದ್ರ ಸರ್ಕಾರ ನೀಡುವ 5 ಕೆಜಿ ಅಕ್ಕಿ ಬಿಟ್ಟು 10 ಕೆಜಿ ಅಕ್ಕಿ ಕೊಡಬೇಕು.200 ಯುನಿಟ್ ವಿದ್ಯುತ್ ಫ್ರೀ ಕೊಡ್ತಿವಿ ಎಂದು ಹೇಳಿದ್ರು.ಆದ್ರೆ 200 ಯುನೈಟೆಡ್ ವಿದ್ಯುತ್ ಫ್ರೀ ಕೊಡ್ತಿಲ್ಲ.ಜನರು ವಿದ್ಯುತ್ ಬೆಲೆಯನ್ನು ಖರೀದಿ ಮಾಡಿದ್ದಾರೆ.ಗೃಹ ಜ್ಯೋತಿ ಯೋಜನೆ ಇಂದ ಜಗಳಗಳು ಶುರುವಾಗಿದೆ.ಯುವನಿಧಿ ಯೋಜನೆ ಬಗ್ಗೆ ಬಹುತೇಕ ಗೊಂದಲ ಇದೆ.ಎಲ್ಲಾ ನಿರುದ್ಯೋಗಿಗಳಿಗೆ 3000 ಹಣ ನೀಡಬೇಕು.ಶಕ್ತಿ ಯೊಜನ ಇಂದ ಬಸ್ ಗಳ ಕೊರತೆ ಉಂಟಾಗಿದೆ.ನಡು ರಸ್ತೆಯಲ್ಲಿಯೇ ಬಸ್ ಗಳು ಕೆಟ್ಟು ನಿಲ್ಲುತಿದೆ.ಶಕ್ತಿ ಯೊಜನೆ ಇಂದ ಆಟೋ ಚಾಲಕರ ಪರಿಸ್ಥಿತಿ ಹದಗೆಟ್ಟಿದೆ.ಮೋಸ ನಿಲ್ಲಿಸಿ.ಗ್ಯಾರಂಟಿ ಜಾರಿಗೊಳಿಸಿ ಎಂಬ ಶೀರ್ಷಕ ಅಡಿಯಲ್ಲಿ ನಾವು ಹೊರಟ ಮಾಡಲಿದ್ದೆವೆ ಎಂದು ಸಚಿವ ಅಶ್ವಥ್ ‌ನಾರಾಯಣ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ