ಎಟಿಎಂ ಹಣದೊಂದಿಗೆ ಪರಾರಿಯಾಗಿದ್ದ ಆರೋಪಿ ಪತ್ನಿ ಬಂಧನ: 79 ಲಕ್ಷ ರೂ.ವಶಕ್ಕೆ

ಸೋಮವಾರ, 28 ನವೆಂಬರ್ 2016 (14:02 IST)
ಎಟಿಎಂಗಳಿಗೆ ಹಣ ವಿತರಿಸುವ ವಾಹನವನ್ನು ಕದ್ದುಕೊಂಡು ಪರಾರಿಯಾಗಿದ್ದ ವಾಹನ ಚಾಲಕ ಸೆಲ್ವರಾಜ್ ಪತ್ನಿಯನ್ನು ಪೊಲೀಸರು ಬಂಧಿಸಿದ್ದಾರೆ. 
 
ಆರೋಪಿ ಚಾಲಕನ ಪತ್ನಿ ಎಲ್ವಿನ್ ಸೆಲ್ವರಾಜ್‌ಳನ್ನು ಪೊಲೀಸರು ಬಂಧಿಸಿ ಆಕೆಯಿಂದ 79.8 ಲಕ್ಷ ರೂಪಾಯಿಗಳನ್ನು ವಶಪಡಿಸಿಕೊಂಡಿದ್ದಾರೆ. ಮುಖ್ಯ ಆರೋಪಿ ಡೊಮ್ನಿಕ್ ಸೆಲ್ವರಾಜ್‌ ರಾಯ್ ಇನ್ನೂ ಪರಾರಿಯಾಗಿದ್ದು ಬಂಧನಕ್ಕಾಗಿ ಜಾಲ ಬೀಸಲಾಗಿದೆ. 
 
ಬ್ಯಾಂಕ್ ಎಟಿಎಂಗಳಿಗೆ ಹಣವನ್ನು ವಿತರಿಸಲು 1,37 ಕೋಟಿ ರೂಪಾಯಿಗಳನ್ನು ತೆಗೆದುಕೊಂಡು ಹೋಗುವಾಗ ಭದ್ರತಾ ಸಿಬ್ಬಂದಿಯನ್ನು ವಂಚಿಸಿದ ಚಾಲಕ ಡೊಮ್ನಿಕ್ ಸೆಲ್ವರಾಜ್, ಹಣದ ವಾಹನದೊಂದಿಗೆ ಪರಾರಿಯಾಗಿದ್ದನು. ನಂತರ ಮಾರನೇ ದಿನ ನವೆಂಬರ್ 24 ರಂದು ವಾಹನವನ್ನು ವಸಂತನಗರ್ ಪ್ರದೇಶದಲ್ಲಿ ಬಿಟ್ಟು ಪರಾರಿಯಾಗಿದ್ದನು. ವಾಹನದಲ್ಲಿ 45 ಲಕ್ಷ ರೂ. ಮತ್ತು ಗನ್ ಕಂಡು ಬಂದಿತ್ತು. 
 
ಪೊಲೀಸ್ ತಂಡಗಳು ಆರೋಪಿಯನ್ನು ಚೆನ್ನೈ, ಹೈದ್ರಾಬಾದ್ ಮತ್ತು ಕೇರಳದ ವಿವಿಧ ಜಿಲ್ಲೆಗಳಲ್ಲಿ ಹುಡುಕಾಟ ನಡೆಸುತ್ತಿವೆ.
 
ನಗರದ ಲಿಂಗರಾಜಪುರಂ ನಿವಾಸಿಯಾದ ಚಾಲಕ ಡೊಮ್ನಿಕ್ ಸೆಲ್ವರಾಜ್, ಪತ್ನಿಗೆ 79 ಲಕ್ಷ ರೂಪಾಯಿಗಳನ್ನು ಉಳಿದ ಹಣದೊಂದಿಗೆ ಪರಾರಿಯಾಗಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ