ಗಣಪತಿಗೆ ಕುರಿ ಮಾಂಸದ ಊಟ: ವಿವಾದ ಸೃಷ್ಟಿಸಿದ ಆಸ್ಟ್ರೇಲಿಯಾ ಜಾಹೀರಾತು

ಮಂಗಳವಾರ, 12 ಸೆಪ್ಟಂಬರ್ 2017 (11:11 IST)
ಹಿಂದೂಗಳ ದೈವ ಗಣೇಶ ಮೂರ್ತಿ ಕುರಿ ಮಾಂಸ ತಿನ್ನುವ ರೀತಿ ಜಾಹೀರಾತು ನಿರ್ಮಿಸಿರುವ ಆಸ್ಟ್ರೇಲಿಯಾ ಕಂಪನಿ ವಿರುದ್ಧ ಭಾರತ ಅಧಿಕೃತ ದೂರು ದಾಖಲು ಮಾಡಿದೆ.
 

ಆಸ್ಟ್ರೇಲಿಯಾದ ಗ್ರೂಪ್ ಮೀಟ್ ಮತ್ತು ಲೈವ್ ಸ್ಟಾಕ್ ಕಂಪನಿಯ ಟಿವಿ ಕಮರ್ಷಿಯಲ್`ನಲ್ಲಿ ಹಿಂದೂಗಳ ಆರಾಧ್ಯ ದೈವ ಗಣೇಶ, ಜೀಸಸ್, ಬುದ್ಧ ಮುಂತಾದವರು ಕುರಿ ಮಾಂಸ ತಿನ್ನುತ್ತಿರುವ ರೀತಿ ಚಿತ್ರಸಲಾಗಿದೆ. ಎಲ್ಲರೂ ಒಟ್ಟಿಗೆ ಕುಳಿತು ಮಾಮಸದ ೂಟ ಮಾಡುತ್ತ಻.. ಮಾಂಸಕ್ಕಾಗಿ ಗ್ಲಾಸ್ ಹಿಡಿಯುತ್ತಿರುವ ಅವಹೇಳನಕಾರಿ ದೃಶ್ಯ ಇದರಲ್ಲಿದೆ.

ಯಾಹಾರಿ  ಕೈಯಲ್ಲಿ ಸಸ್ಮೋದಕ ಇಡುವುದು ನಮ್ಮ ಭಾರತೀಯ ಸಂಪ್ರದಾಯದಲ್ಲಿ ನಡೆದುಕೊಂಡು ಬಂದಿರುವ ಪದ್ಧತಿ. ಆದರೆ, ಆಸ್ಟ್ರೇಲಿಯಾ ಕಂಪನಿ ನಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡಿದೆ ಎಂದು ಆಸ್ಟ್ರೇಲಿಯಾದಲ್ಲಿರುವ ಹಿಂದೂ ಸಮುದಾಯ ಖಂಡಿಸಿದೆ. ಈ ವಿಷಯವನ್ನ ಆಸ್ಟ್ರೇಲಿಯಾ ಸರ್ಕಾರದ ಗಮನಕ್ಕೆ ತಂದು ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಒತ್ತಾಯಿಸುವುದಾಗಿ ಕ್ಯಾನ್ ಬೆರಾದ ಇಂಡಿಯನ್ ಹೈಕಮೀಷನರ್ ತಿಳಿಸಿದ್ದಾರೆ. ಜೊತೆಗೆ ಸಿಡ್ನಿ ರಾಯಭಾರ ಕಚೇರಿ ಸಹ ಕೂಡಲೇ ಜಾಹೀರಾತನ್ನ ಹಿಂಪಡೆಯುವಂತೆ ಮೀಟ್ ಲೈವ್ ಸ್ಟಾಕ್ ಆಸ್ಟ್ರೇಲಿಯಾ ಕಂಪನಿಗೆ ಒತ್ತಾಯಿಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ