ಇಂದು ನಗರದಲ್ಲಿ ಆಟೋ ಚಾಲಕರ ಮುಷ್ಕರ ಹಿನ್ನಲೆ ಆಟೋ ಓಡಿಸದಂತೆ ಆಟೋ ಚಾಲಕರಿಗೆ ತರಾಟೆ ತೆಗೆದುಕೊಳ್ಳಲಾಗಿದೆ.ಬೆಳಿಗ್ಗೆಯಿಂದ ಸಾಕಷ್ಟು ಆಟೋಗಳು ಸಂಚಾರ ನಡೆಸುತ್ತಿದ್ವು.ಈ ಹಿನ್ನಲೆ ಮುಷ್ಕರದ ಬಗ್ಗೆ ಆಟೋ ಚಾಲಕರಿಗೆ ಕೆಲ ಆಟೋ ಚಾಲಕರು ಅರಿವು ಮೂಡಿಸುತ್ತಿದ್ದಾರೆ.ಅಲ್ಲದೇ ಆಟೋ ಹತ್ತಿದ್ದವರನ್ನು ಆಟೋ ಚಾಲಕರು ಕೆಳಗೆ ಇಳಿಸುತ್ತಿದ್ದಾರೆ.
ಆಟೋ ಓಡಿಸುತ್ತಿದ್ದ ಚಾಲಕರಿಗೆ ಮಿಕ್ಕ ಚಾಲಕರು ತರಟೆ ತೆಗೆದುಕೊಂಡಿದ್ದಾರೆ.ಮಗುವಿಗೆ ಸ್ಕೂಲ್ ಫೀಸ್ ಕಟ್ಟಬೇಕು ಅದಕ್ಕೆ ಆಟೋ ಓಡಿಸುತ್ತಿದ್ದೇವೆ ಅಂತ ಕೆಲ ಚಾಲಕರು ಹೇಳುತ್ತಿದ್ದು,ಇನ್ನು ಕೆಲ ಆಟೋಚಾಲಕರು ನಮಗೆ ಮಕ್ಕಳು ಇಲ್ವ, ನಾವು ಫೀಸ್ ಕಟ್ಟಬಾರದಾ ಎನ್ನುತ್ತಿದ್ದಾರೆ.
ಬೆಂಗಳೂರಲ್ಲಿ ಆಟೋ ಬಂದ್ ಇದ್ರು.ಆಟೋ ಮುಷ್ಕರಕ್ಕೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ.ಆಟೋ ಚಾಲಕರಿಂದ ಮುಷ್ಕರಕ್ಕೆ ಬೆಂಬಲ ಸಿಗ್ತಿಲ್ಲ.ಎಂದಿನಂತೆ ಸಂಚಾರ ನಮ್ಮ ಯಾತ್ರಿ ಚಾಲಕರು ಆಟೋ ಓಡಿಸುತ್ತಿದ್ದಾರೆ.