ಆಟೋ ಡ್ರೈವರ್ಸ್ ಗಳ ಸಂಕಷ್ಟ

ಭಾನುವಾರ, 8 ಆಗಸ್ಟ್ 2021 (21:52 IST)
ಸಿಲಿಕಾನ್ ಸಿಟಿಯಲ್ಲಿ ಸಿಲಿಂಡರ್ ದರ, ಅಗತ್ಯ ವಸ್ತುಗಳ ದರದಿಂದ ಆಟೋ ಡ್ರೈವರ್ಸ್ ಗಳು ತತ್ತರಿಸಿದ್ದಾರೆ. ಒಂದು ಹೊತ್ತು ಊಟಕ್ಕೂ ಕೂಡ ಪರದಾಟ ನಡೆಸುತ್ತಿದ್ದಾರೆ. ಇನ್ನೂ ಆಟೋ ಡ್ರೈವರ್ಸ್ ಗಳು ತಮ್ಮದೇ ಆದ ಬೇಡಿಕೆಗಳನ್ನ ಇಟ್ಟುಕೊಂಡು ಇಂದು ಸಾಂಕೇತಿಕ ‌ಪ್ರತಿಭಟನೆ ನಡೆಸಿದ್ರು. ವರ್ಷಕ್ಕೆ ಒಮ್ಮೆ ಮೀಟರ್ ಸೀಲಿಂಗ್ ಚೇಂಜ್ ಮಾಡ್ತಾರೆ. 150 ರೂಪಾಯಿ ಇದ್ದ ಮೀಟರ್ ಸಿಲೀಂಗ್ ದರ ಈಗ 500 ರೂಪಾಯಿ ಹೆಚ್ಚಾಳ ಮಾಡಲು ಸರ್ಕಾರ ಚಿಂತನೆ ನಡೆಸಿದ್ದಾರೆ. ಪೆಟ್ರೋಲ್, ಡಿಸೇಲ್ ಬೆಲೆ ಇಳಿಕೆ ಮಾಡಿ. ಆಟೋ ದರ ಹೆಚ್ಚಾಳ ಮಾಡಿದ್ರೆ ಅನುಕೂಲವಾಗುತ್ತೆ. ಎಷ್ಟೋ ಮನವಿ ಮಾಡುದೇವೆ. ಈ ಕುರಿತಂತೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಮಂಜುನಾಥ್ ಗೆ ಪತ್ರ ಬರೆದು ಮನವಿ ಮಾಡಿದೇವೆ . ಆದ್ರು ಯಾವುದೇ ಪ್ರಯೋಜನವಾಗ್ತಿಲ್ಲ ಎಂದು  ಆಟೋ ಡ್ರೈವರ್ಸ್ ಸಂಘಟನೆಯ ಸಿ,ಐ ,ಟಿ,ಯು ಯವರು  ವ್ಯಾಪಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ