ನಾಳೆಯಿಂದ ಬೆಂಗಳೂರಿನಲ್ಲಿ ಆಟೋ ಪ್ರಯಾಣ ದರ ಬಲು ದುಬಾರಿ

ಮಂಗಳವಾರ, 30 ನವೆಂಬರ್ 2021 (20:45 IST)
ದಿನೇ ದಿನೇ ಅಗತ್ಯ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನ ತತ್ತರಿಸಿದ್ದಾರೆ.ಈ ನಡುವೆ ಸರ್ಕಾರ ಬೆಂಗಳೂರಿನಲ್ಲಿ ಆಟೋ ದರ ಪರಿಷ್ಕರಣೆ ಮಾಡಿದ್ದು,ನಾಳೆಯಿಂದ ನೂತನ ದರ ಜಾರಿಗೆ ಬರುತ್ತಿದೆ.ಕೊರೊನಾ ಲಾಕ್ ಡೌನ್ ನಿಂದ ಜನರು ಜೀವನ ಮತ್ತು ಕೆಲಸ ಕಳೆದುಕೊಂಡಿದ್ದಾರೆ..ಇನ್ನು ದಿನ ಬಳಕೆ ವಸ್ತುಗಳ ಬೆಲೆಯು ದುಬಾರಿ ದುನಿಯಾದಲ್ಲಿ ಜೀವನ ಸಾಗಿಸೋದು ಒಂದು ಸವಾಲಾಗಿದೆ… ಇತ್ತ ಆಟೋ ಚಾಲಕರು ನೋಡಿದ್ರೆ ನಮಗೆ ಹಳೆಯ ದರದಲ್ಲಿ ಆಟೋ ರೋಡಿಗಿಳಿಸಲು ಆಗ್ತಿಲ್ಲ ಪ್ರಯಾಣಿಕರಿಗೆ ಸೇವೆ ನೀಡಲು ತುಂಬಾ ಕಷ್ಟ ಆಗ್ತಿದೆ ಹಾಗಾಗಿ ಆಟೋ ಮೀಟರ್ ದರ ಹೆಚ್ಚಿಸುವಂತೆ ಚಾಲಕ ಸಂಘಟನೆಗಳು ಮನವಿ ಮಾಡಿದರು..ಚಾಲಕರ ಬೇಡಿಕೆಗೆ ಸ್ವಂದಿಸಿದ ಜಿಲ್ಲಾಡಳಿತ ಕನಿಷ್ಟ ದರ 25 ರುಪಾಯಿ ಇದ್ದ ದರವನ್ಮು 30 ರುಪಾಯಿಗೆ  ಏರಿಕೆ ಮಾಡಿದೆ‌.ಈ ದರ ನಾಳೆಯಿಂದ ಅಧಿಕೃತ ವಾಗಿ ಜಾರಿಗೆ ಬರುತ್ತಿದೆ.ಇನ್ನೂ ಇತ್ತಾ ನಗರದ ಜನಸಾಮಾನ್ಯರು ಆಟೋ ದರ ಏರಿಕೆಯಿಂದ ಬೇಸೆತ್ತಿದ್ದಾರೆ
 
ಆಟೋ ಪ್ರಯಾಣ ದರ ಏರಿಕೆ 
 
                      ಈಗಿನ ದರ ..     ಡಿ.1ರ ನಂತರ   
ಕನಿಷ್ಠ ದರ       ₹25                     ₹30 
ಪ್ರತಿ.ಕಿ.ಮೀ       ₹13                     ₹15
 
ಮಾರ್ಗ                                ಕಿ.ಮೀ        ಪ್ರಸುತ್ತ ದರ       ಡಿ.1ರ ನಂತರದ ದರ   
ಮೆಜೆಸ್ಟಿಕ್ ಟು ಹೆಬ್ಬಾಳ    -     10              ₹130                       ₹150
ಮೆಜೆಸ್ಟಿಕ್ ಟು ಜಾಲಹಳ್ಳಿ   -    12            ₹162                      ₹187
ಮೆಜೆಸ್ಟಿಕ್ ಟು ಸುಮನಹಳ್ಳಿ -     13             ₹169                      ₹195
ಮೆಜೆಸ್ಟಿಕ್ ಟು ಕೆಂಗೇರಿ      -     15            ₹195                     ₹ 225
ಮೆಜೆಸ್ಟಿಕ್ ಟು ಬನಶಂಕರಿ   -     8.1            ₹104                       ₹120
ಮೆಜೆಸ್ಟಿಕ್ ಟು ಅರಕೆರೆ       -      13              ₹169                      ₹195
ಮೆಜೆಸ್ಟಿಕ್ ಟು ಸಿಲ್ಕ್ ಬೋರ್ಡ್ -   13           ₹169                      ₹195
ಮೆಜೆಸ್ಟಿಕ್ ಟು ಮಾರತ್ ಹಳ್ಳಿ     -  20          ₹260                      ₹300
ಮೆಜೆಸ್ಟಿಕ್ ಟು ಬಸವೇಶ್ವರ ನಗರ -  5.5          ₹72                       ₹ 83
ಮೆಜೆಸ್ಟಿಕ್ ಟು ಯಶವಂತಪುರ    -   7.7        ₹100                      ₹120
ಮೆಜೆಸ್ಟಿಕ್​ ಟು ಕೆಆರ್​ ಪುರಂ- 18                 R 234                       270
 
 
ಈ ಹಿಂದೆ ಬೆಂಗಳೂರು ನಗರದಲ್ಲಿ ಮಿನಿಮಮ್ ಆಟೋ ದರ 25 ರುಪಾಯಿ ಇದ್ದು ಅದನ್ನು 30 ರುಪಾಯಿ ಗೆ ಏರಿಕೆ ಮಾಡಲಾಗಿದೆ. ಪ್ರತಿ ಕಿಮೀ ಮೊದಲು 13 ರುಪಾಯಿ ಇದ್ದು ಅದನ್ನು 15 ರುಪಾಯಿ ಗೆ ಏರಿಕೆ ಮಾಡಲಾಗಿದೆ..
2013 ರಲ್ಲಿ ಆಟೋ ಪ್ರಯಾಣ ದರ ಏರಿಕೆ ಮಾಡಲಾಗಿತ್ತು.ಇದರಿಂದ ಆಟೋ ಚಾಲಕರು ಸಂಕಷ್ಟದಲ್ಲಿ ಸಿಲುಕಿದ ಪರಿಣಾಮ ಆಟೋ ಪ್ರಯಾಣ ದರ ಹೆಚ್ಚಳ ಮಾಡುವಲ್ಲಿ ಸರ್ಕಾರ ಸಮ್ಮತಿ ನೀಡಿದೆ..
 
ಇನ್ನು ನಗರದಲ್ಲಿ ಆಟೋ ಚಾಲಕರ  ಮೀಟರ್ ದರ ಏರಿಕೆಯ ಬೇಡಿಕೆ ಇಂದು ನಿನ್ನೆಯದಲ್ಲ.. ಅದರೆ ಕಳೆದ ಮೂರು ತಿಂಗಳಿನಿಂದ ದರ ಪರಿಷ್ಕರಣೆಗೆ ಹೋರಾಟ ಚಾಲಕರು ಮಾಡುತ್ತಲೇ ಬರುತ್ತಿದರು‌, ಆಟೋ ರಿಕ್ಷಾ ಬಿಡಿ ಭಾಗ, ಗ್ಯಾಸ್, ಇನ್ಶುರೆನ್ಸ್ ದರ ಹೆಚ್ಚಳವಾಗಿದ್ದು, ಇತ್ತ ಅಗತ್ಯ ವಸ್ತುಗಳ ಬೆಲೆ, ದಿನ ಬಳಕೆ ವಸ್ತುಗಳ ಬೆಲೆ ಹೆಚ್ಚಾಗ್ತಾ ಇದೆ. ಈ ಹಿನ್ನೆಲೆ ಆಟೊ ದರ ಪರಿಷ್ಕರಣೆ ಒತ್ತಾಯಿಸಿದರು. ಹೀಗಾಗಿ ಸರ್ಕಾರ ಸಾಧಕ ಬಾಧಕಗಳನ್ನ ಪರಿಶೀಲನೆ ಮಾಡಿ ಡಿಸೆಂಬರ್ 1 ರಿಂದ ಅಂದರೆ ನಾಳೆಯಿಂದ ಅನ್ವಯವಾಗುವಂತೆ ದರ ಪರಿಷ್ಕರಣೆ ಮಾಡಿದ್ದಾರೆ. . ಮೂರು ತಿಂಗಳ ತನಕ ಆಟೋ ಮೀಟರ್ ಗಳ ಬದಲಾವಣೆಗೆ ಕಾಲಾವಕಾಶ ನೀಡಲಾಗಿದೆ..  ಪ್ರಾದೇಶಿಕ ಸಾರಿಗೆ ಪ್ರಾಧಿಕಾರಕ್ಕೆ ಚಾಲಕರು  ಧನ್ಯವಾದ ಸಲ್ಲಿಸಿದ್ದಾರೆ‌.ಒಟ್ಟಿನಲ್ಲಿ  ಕಳೆದ 8 ವರ್ಷಗಳ ಬೇಡಿಕೆಗೆ  ಸರ್ಕಾರ ಅಸ್ತು ಅಂದು ಆಟೋ ಚಾಲಕರಿಗೆ ಸಿಹಿ ಸುದ್ದಿ ನೀಡಿದೆ. ರಾಜಧಾನಿ ಪ್ರಯಾಣಿಕರಿಗೆ ಮಾತ್ರ ಇದು ನುಂಗಲಾರದ ತುತ್ತಾಗಿದೆ..
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ