ಉತ್ತರಾಖಂಡದಲ್ಲಿ ಮತ್ತೆ ಹಿಮಕುಸಿತ

ಶನಿವಾರ, 1 ಅಕ್ಟೋಬರ್ 2022 (20:08 IST)
ಉತ್ತರಾಖಂಡದಲ್ಲಿ ಮತ್ತೆ ಹಿಮಕುಸಿತ ಸಂಭವಿಸಿದೆ. ಇಂದು ಬೆಳಗ್ಗೆ ಹಿಮ ಹಾಲಿನ ನೊರೆಯಂತೆ ಉಕ್ಕಿ ಹರಿದಿದೆ. ಇದರಲ್ಲಿ ವಿಶ್ವಖ್ಯಾತಿಯ ಕೇದಾರನಾಥ ದೇವಾಲಯಕ್ಕೆ ಯಾವುದೇ ಹಾನಿಯಾಗಿಲ್ಲ. ಕೇದಾರನಾಥ ಕಣಿವೆಯಲ್ಲಿ ಬೃಹತ್​ ಪ್ರಮಾಣದ ಹಿಮಪಾತವಾಗಿದ್ದು, ಯಾವುದೇ ಹಾನಿ ಸಂಭವಿಸಿಲ್ಲ. ಈ ಬಗ್ಗೆ ಮಾಹಿತಿ ನೀಡಿದ ಬದರಿನಾಥ-ಕೇದಾರನಾಥ ದೇವಾಲಯ ಸಮಿತಿ ಅಧ್ಯಕ್ಷ ಅಜೇಂದ್ರ ಅಜಯ್, ಇಂದಿನ ಹಿಮಕುಸಿತದಿಂದ ಯಾವುದೇ ಹಾನಿ ಸಂಭವಿಸಿಲ್ಲ. ದೇವಾಲಯಕ್ಕೂ ಏನೂ ಆಗಿಲ್ಲ. ಬೆಳ್ಳಂಬೆಳಗ್ಗೆ ಹಿಮ ಕುಸಿಯಿತು. ಇದರಿಂದ ಹಲವೆಡೆ ಮಳೆಯಾಗಿದೆ ಎಂದು ತಿಳಿಸಿದರು. ವಾರದ ಹಿಂದಷ್ಟೇ ವಿಶ್ವವಿಖ್ಯಾತ ಕೇದಾರನಾಥ ಧಾಮ ಚೋರಬರಿ ಹಿಮನದಿಯ ಜಲಾನಯನ ಪ್ರದೇಶದಲ್ಲಿ ಹಿಮಪಾತವಾಗಿತ್ತು. ಆಗಲೂ ಯಾವುದೇ ಹಾನಿ ಸಂಭವಿಸಿರಲಿಲ್ಲ. ಬಳಿಕ ದೇವಸ್ಥಾನ ಆಡಳಿತ ಮಂಡಳಿ ಎಚ್ಚೆತ್ತುಕೊಂಡು ಭಕ್ತರಿಗೆ ದೇವಸ್ಥಾನ ಪ್ರವೇಶ ನಿಷೇಧಿಸಿತ್ತು. ಹಿಮ ಕರಗಿ ದುಮ್ಮಿಕ್ಕುತ್ತಿರುವ ದೃಶ್ಯ ಸೆರೆಯಾಗಿದೆ. ಜಾಗತಿಕ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚುತ್ತಾನೆ ಇದೆ. ಇದರ ಪರಿಣಾಮ ಹಿಮಪರ್ವತಗಳು ಕರಗಿ ನಾಶವಾಗ್ತಿದೆ. ಜಾಗತಿಕ ತಾಪಮಾನದಿಂದ ಉಂಟಾಗುವ ಅಪಾಯದ ಕುರಿತು ವಿಶ್ವಸಂಸ್ಥೆ ಎಚ್ಚರಿಸುತ್ತಲೇ ಬಂದಿದೆ. ಆದ್ರೂ ಕೂಡ ಯಾವ ದೇಶವು ಎಚ್ಚೆತ್ತಂತೆ ಕಾಣ್ತಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ