ಯಲಹಂಕ ಸರ್ಕಾರಿ ಆಸ್ಪತ್ರೆಗೆಆಕ್ಸಿಜನ್ ಕಂಟೇನರ್ ದೇಣಿಗೆ

ಮಂಗಳವಾರ, 13 ಜುಲೈ 2021 (19:56 IST)
ಚೀನಿ ವೈರಾಣು ಕರೋನಾ ಹೆಮ್ಮಾರಿಯಿಂದ ಆಗ್ತಿರುವ ಅನಾಹುತಗಳು ಒಂದೆರಡಲ್ಲ..ಈಗಾಗಲೇ ಕಳೆದ ಮತ್ತು ಈ ವರ್ಷದಲ್ಲಿ ಕರೋನಾ ಅವಾಂತರದಿಂದ ಸಾಕಷ್ಟು ಸಾವು ನೋವುಗಳಾಗಿವೆ.. ಇದನ್ನ ಗಮನದಲ್ಲಿಕೊಂಡು ಜನಸಾಮಾನ್ಯರ ಅನುಕೂಲಕ್ಕಾಗಿ ಖಾಸಗಿ ಸಂಸ್ಥೆ ಯಲಹಂಕ ಸರ್ಕಾರಿ ಆಸ್ಪತ್ರೆಗೆ ಸುಮಾರು 60 ಲಕ್ಷ ಬೆಲೆಯ ಆಕ್ಸಿಜನ್ ಕಂಟೇನರ್ ನ ನೀಡಿದೆ.. ಅಕ್ಸಿಜೆನ್ ಘಟಕ ಸೇರಿದಂತೆ 5 ಹಾಸಿಗೆಗಳ ಐ.ಸಿ.ಯುವನ್ನು ಸಹ ಜನ ಸೇವೆಗೆ ಸಮರ್ಪಿಸಲಾಯಿತು..
ಯಲಹಂಕ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಆಕ್ಸಿಜನ್ ಕಂಟೈನರ್ ಐಸಿಯುವನ್ನು ಅಳವಡಿಸಿಕೊಳ್ಳಲಾಗಿದೆ..
5 ಬೆಡ್ಗಳ ಐಸಿಯುವನ್ನು ಬಡ ಜನಸಾಮಾನ್ಯರು ಬಳಸಿಕೊಳ್ಳಬಹುದು..  ಇಂತಹ ಸೇವೆಯನ್ನು Exxon Mobiles ಮತ್ತು ಸಮರ್ಥನಂ ಅಂಗವಿಕಲ ಸಂಸ್ಥೆಗಳು ಜಂಟಿಯಾಗಿ ಒದಗಿಸಿವೆ.. ಯಲಹಂಕ ಸರ್ಕಾರಿ ಆಸ್ಪತ್ರೆಯೂ ಸಹ ಕಳೆದ ಸಲದ ಎರಡನೇ ಅಲೇಯ ವೇಳೆ ಸಾವಿರಾರು ಜೀವ ಉಳಿಸಿದೆ.. ಯಾವ ಖಾಸಗಿ ಆಸ್ಪತ್ರೆಗೂ ಕಡಿಮೆ ಇಲ್ಲದಂತೆ ಯಲಹಂಕ ಸರ್ಕಾರಿ ಆಸ್ಪತ್ರೆಯಲ್ಲೂ ಸಕಲ ಸೌಲಭ್ಯಗಳ ಆರೋಗ್ಯ ಸೇವೆ ಸಿಗಲಿದೆ ಎಂದು ಕಾರ್ಯಕ್ರಮ ಉದ್ಘಾಟಿಸಿ BDA ಅಧ್ಯಕ್ಷ S.R. ವಿಶ್ವನಾಥ್ ತಿಳಿಸಿದರು..ಇದೇ ವೇಳೆ ಆಸ್ಪತ್ರೆ ಸಿಬ್ಬಂದಿ, ಖಾಸಗಿ  ಸಂಸ್ಥೆ ಗಣ್ಯರು ಹಾಜರಿದ್ದರು..

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ