ಜನಾರ್ಧನ ರೆಡ್ಡಿ ತಲೆಮರೆಸಿಕೊಂಡಿರುವ ಬಗ್ಗೆ ಶ್ರೀರಾಮುಲು ಹೇಳಿದ್ದೇನು?
ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಬಿ ಶ್ರೀರಾಮುಲು ‘ಜನಾರ್ಧನ ರೆಡ್ಡಿ ಎಲ್ಲಿದ್ದಾರೆಂಬ ಮಾಹಿತಿ ನನಗಿಲ್ಲ. ನಾನೂ ಬೆಳಿಗ್ಗೆಯಿಂದ ಚಾನೆಲ್ ಗಳಲ್ಲಿ ಈ ಕುರಿತು ಸುದ್ದಿ ನೋಡುತ್ತಿದ್ದೇನೆ. ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಕಾನೂನು ಅದರ ಕೆಲಸ ಮಾಡುತ್ತದೆ’ ಎಂದು ಶ್ರೀರಾಮುಲು ಹೇಳಿಕೆ ನೀಡಿದ್ದಾರೆ.
ರಾಮುಲು ಮತ್ತು ಜನಾರ್ಧನ ರೆಡ್ಡಿ ಆಪ್ತ ಸ್ನೇಹಿತರು ಪರಮಾಪ್ತರು. ಚುನಾವಣೆಯಲ್ಲಿ ಸೋಲಿನ ಬಳಿಕ ಸ್ನೇಹಿತನ ಮೂಲಕ ರಾಮುಲು ಆತಂಕಕ್ಕೊಳಗಾಗಿರುವುದಂತೂ ನಿಜ.