ಬಾಬ್ರಿ ಮಸೀದಿ ಕೇಸ್ : ಗೃಹ ಸಚಿವರು ಹೇಳೋದೇನು?

ಬುಧವಾರ, 30 ಸೆಪ್ಟಂಬರ್ 2020 (16:21 IST)
ಬಾಬ್ರಿ ಮಸೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಕೋರ್ಟ್ ನೀಡಿರೋದಕ್ಕೆ ರಾಜ್ಯದ ಗೃಹ ಸಚಿವ ಪ್ರತಿಕ್ರಿಯಿಸಿದ್ದಾರೆ.

ಬಾಬ್ರಿ ಮಸೀದಿ ಕೇಸ್ ಗೆ ಸಂಬಂಧಿಸಿದಂತೆ ಬಿಜೆಪಿ ಹಿರಿಯ ನಾಯಕರಾದ ಎಲ್. ಕೆ. ಅಡ್ವಾಣಿ, ಮುರಳಿ ಮನೋಹರ ಜೋಶಿ, ಉಮಾಭಾರತಿ ಹಾಗೂ ಇತರರ ಮೇಲೆ ಇದ್ದ ಪ್ರಕರಣ ಸಂಬಂಧ ಲಕ್ನೋದ ಸಿಬಿಐ ನ್ಯಾಯಾಲಯವು ತೀರ್ಪು ನೀಡಿರುವುದು ಸ್ವಾಗತಾರ್ಹವಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

28 ವರ್ಷಗಳ ನಂತರ ಅಡ್ವಾಣಿ ಸೇರಿದಂತೆ ಪ್ರಮುಖ ನಾಯಕರು ಆರೋಪ ಮುಕ್ತರಾಗಿದ್ದು, ಸಂತಸದ ವಿಷಯವಾಗಿದೆ. ಇದರೊಂದಿಗೆ ಸುಪ್ರೀಂಕೋರ್ಟ್ ರಾಮಮಂದಿರ ನಿರ್ಮಾಣಕ್ಕೆ ಅನುಮತಿ ನೀಡಿರುವುದು ಐತಿಹಾಸಿಕ ತೀರ್ಪಾಗಿದೆ.

ಇದು ಭಾರತದ ಜನರ ಭಾವನೆಗಳಿಗೆ ಸ್ಪಂದಿಸಿದಂತಾಗಿದ್ದು, ದೇಶದ ಎಲ್ಲ ನಾಗರಿಕರು ಈ ತೀರ್ಪನ್ನು ಒಪ್ಪಿಕೊಂಡ ಶಾಂತಿ ಸೌರ್ಹಾದತೆಯನ್ನು ಕಾಪಾಡಿಕೊಳ್ಳುವಂತೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಮನವಿ ಮಾಡಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ