ಮತ್ತೆ ಕಿಂಗ್ ಮೇಕರ್ ಆದ ಬಿಎಸ್ವೈ: ವಿರೋಧಿಗಳಿಗೆ ಪಾಠ ಕಲಿಸಿದ ರಾಜಾಹುಲಿ!

ಬುಧವಾರ, 4 ಆಗಸ್ಟ್ 2021 (14:48 IST)
ಬೆಂಗಳೂರು(ಆ. 04): ಬಿಎಸ್ವೈ ರಾಜೀನಾಮೆ ಬಳಿಕ ಬಸವರಾಜ ಬೊಮ್ಮಾಯಿ ಕರ್ನಾಟಕದ ನೂತನ ಸಿಎಂ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಸಿಎಂ ಆದ ಬೆನ್ನಲ್ಲೇ ಸಂಪುಟ ರಚನೆ ಕಸರತ್ತು ಆರಂಭವಾಗಿದ್ದು, ಇಂದು ಮಧ್ಯಾಹ್ನ 2.15ಕ್ಕೆ ರಾಜಭವನದಲ್ಲಿ ಸಚಿವರ ಪ್ರಮಾಣವಚನ ಸಮಾರಮಭ ನಡೆಯಲಿದೆ. ಹೀಗಿದ್ದರೂ ಯಾರೆಲ್ಲಾ ಸಸಚಿವರಾಗುತ್ತಾರೆ ಎಂಬ ಕುತೂಹಲ ಇನ್ನೂ ಮುಂದುವರೆದಿದೆ. ಆದರೀಗ ಈ ಸಂಪುಟ ಕಸರತ್ತಿನ ಮಧ್ಯೆ ಬಿಎಸ್ವೈ ಮತ್ತೆ ಕಿಂಗ್ ಮೇಕರ್ ಆಗಿ ಹೊರಹೊಮ್ಮಿದ್ದಾರೆ.
* ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದ ಯಡಿಯೂರಪ್ಪ.
* ತನ್ನ ವಿರೋಧಿಗಳಿಗೆ ಪಾಠ ಕಲಿಸಿದ ರಾಜಹುಲಿ.
* ಒಂದು ಕಡೆ ಬಸವರಾಜ್ ಬೊಮ್ಮಾಯಿಯನ್ನ ಸಿಎಂ ಮಾಡಿ ಗೆದ್ದಿದ್ದ ಬಿಎಸ್ವೈ.
* ಇದೀಗ ವಿರೋಧಿ ಪಾಳಯಕ್ಕೆ ಶಾಕ್ ನೀಡಿದ ಯಡಿಯೂರಪ್ಪ.
ಹೌದು ರಾಜೀನಾಮೆ ನೀಡಿದ್ದ ಬಿಎಸ್ವೈ, ಈ ಸ್ಥಾನಕ್ಕೆ ತಮ್ಮ ಆಪ್ತ ಬಸವರಾಜ ಬೊಮ್ಮಾಯಿ ಅವರ ಶಿಫಾರಸ್ಸು ಮಾಡಿ, ಅವರನ್ನೇ ಮುಖ್ಯಮಂತ್ರಿಯಾಗಿಸುವಲ್ಲಿ ಯಶಸ್ವಿಯಾಗಿದ್ದರು. ಈ ಮೂಲಕ ಮೊದಲ ಜಯ ಗಳಿಸಿದ್ದರು. ಇದರ ಬೆನ್ನಲ್ಲೇ ರಾಜಾಹುಲಿ ತಮ್ಮ ವಿರೋಧಿಗಳಿಗೂ ತಕ್ಕ ಪಾಠ ಕಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಬಿಎಸ್ವೈ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಉರುಳಿಸಿದ್ದಾರೆ.
ಬೊಮ್ಮೈಆಇ ಸಂಪುಟದಲ್ಲಿ ಸ್ಥಾನ ಪಡೆಯುವ ಸಂಭಾವ್ಯ ಸಚಿವರ ಹೆಸರುಗಳು ಭಾರೀ ಸದ್ದು ಮಾಡುತ್ತಿವೆ. ಆದರೆ ಈ ಪಟ್ಟಿಯಲ್ಲಿ ಬಿಎಸ್ವೈ ವಿರೋಧಿ ಬಣದಲ್ಲಿ ಗುರುತಿಸಿಕೊಂಡಿದ್ದ ಸಿ. ಪಿ. ಯೋಗೇಶ್ವರ್, ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಸಿಎಂ ಆಕಾಂಕ್ಷಿಯಾಗಿದ್ದ ಅರವಿಂದ್ ಬೆಲ್ಲದ್ ಹೆಸರುಗಳು ಮಾತ್ರ ಕಣ್ಮರೆಯಾಗಿವೆ. ಇದು ಬಿಎಸ್ವೈ ವಿರೋಧಿ ಪಾಳಯಕ್ಕೆ ಬಹುದೊಡ್ಡ ಶಾಕ್ ಕೊಟ್ಟಿದೆ.
ಸದ್ಯ ಸಂಭಾವ್ಯ ಸಚಿವರ ಪಟ್ಟಿಯನ್ವಯ ಬಿಎಸ್ವೈ ಸಿಎಂ ಸ್ಥಾನಕ್ಕೆ ಕುತ್ತು ತಂದವರಿಗೆ ಯಾವುದೇ ಮನ್ನಣೆ ಸಿಗದಿರುವುದು ಸ್ಪಷ್ಟವಾಗಿದೆ. ಮತ್ತೊಂದೆಡೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರೂ ಬಿಎಸ್ವೈ ಮತ್ತೆ ರಾಜ್ಯದಲ್ಲಿ ಕಿಂಗ್ ಮೇಕರ್ ಆಗಿರುವುದು ಸ್ಪಷ್ಟ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ