ಸಿಎಂ ದೆಹಲಿ ಪ್ರವಾಸ ಕುರಿತು ವಿಶೇಷ ಅರ್ಥ ಬೇಡಾ- ಶೆಟ್ಟರ್

ಶುಕ್ರವಾರ, 17 ಜೂನ್ 2022 (15:09 IST)
ನ್ಯಾಶನಲ್ ಹೆರಾಲ್ಡ್ ಹಗರಣದಲ್ಲಿ ತಮ್ಮ ತಪ್ಪು ಇಲ್ಲದಿದ್ದರೆ ಕಾನೂನು ಪ್ರಕಾರ ಹೋರಾಟ ಮಾಡಬೇಕಿತ್ತು. ಯಾಕೆ ಬೀದಿಗಳಿದು ಪ್ರತಿಭಟನೆ ಮಾಡಿದ್ದು? ಇದು ತಪ್ಪನ್ನು ಮುಚ್ಚಿಕೊಳ್ಳಲು ಮಾಡುವ ಹೋರಾಟ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕಿಡಿ ಕಾರಿದರು. 
ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು,
ಏನೇ ಆಗಲಿ ಆರೋಪ ಬಂದಾಗ ಅದನ್ನು ಸಮರ್ಥನೆ ಮಾಡಿಕೊಳ್ಳಲು ಯಾವ ರೀತಿ ಹೋರಾಟ ಮಾಡಬೇಕು? ಎನ್ನುವುದು ಅವರಿಗೆ ಗೊತ್ತಿಲ್ಲ.  ಕಾನೂನು ಇದೇ. ಆ ಮೂಲಕ ಹೋರಾಟ ಮಾಡಲಿ ಎಂದು ಸಲಹೆ ನೀಡಿದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಬೆಂಗಳೂರಿಗೆ ಬರುವ ಕಾರಣ ಜಿಎಸ್​​​​​ಟಿ ಕೌನ್ಸಿಲ್ ಸಭೆ ಹಿನ್ನೆಲೆಯಲ್ಲಿ ದೆಹಲಿಗೆ ಹೋದಾಗ ಹೈಕಮಾಂಡ್​ ಯಾವುದೇ ನಾಯಕರನ್ನು ಭೇಟಿಯಾಗುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಅವರೇ ಈ ಬಗ್ಗೆ ಸ್ಪಷ್ಟಪಡಿಸಿದ್ದಾರೆ ಎಂದು ಜಗದೀಶ್ ಶೆಟ್ಟರ್ ಹೇಳಿದರು.
ಈ ಪ್ರವಾಸದ ವೇಳೆ ಹೈಕಮಾಂಡ್​ ಯಾವುದೇ ನಾಯಕರನ್ನು ಭೇಟಿ ಆಗುತ್ತಿಲ್ಲ, ನಾಳೆ ನಮ್ಮ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಇಲ್ಲಿಯೇ ಬರುತ್ತಾರೆ ಎಂದರು. 
 
ಕೇಂದ್ರ ತಂದಿರುವ ಹೊಸ ಅಗ್ನಿಪಥ್ ಯೋಜನೆ​ ವಿರುದ್ಧ ದೇಶಾದ್ಯಂತ ಪ್ರತಿಭಟನೆ ಕಾವು ಹೆಚ್ಚಾಗುತ್ತಿರುವ ಕುರಿತು ಪ್ರತಿಕ್ರಿಯೆ ನೀಡಿ, ಕೇಂದ್ರ ಸರ್ಕಾರ ಈ ಹೊಸ ಸೇನಾ ಯೋಜನೆಯನ್ನು ಹಿಂತೆಗೆದುಕೊಂಡು ಮೊದಲಿನ ರೀತಿಯಲ್ಲೇ ಸೇನಾ ನೇಮಕಾತಿ ಮಾಡಿಕೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದರು. ಇದು ಸರಿಯಲ್ಲ. ಇದೊಂದು ಒಳ್ಳೆಯ ಯೋಜನೆ ಎಂದರು.
 
ಸಾಕಷ್ಟು ಚರ್ಚೆಗೆ ಗ್ರಾಸವಾದ ಸಿಎಜಿ ವರದಿ ಕುರಿತು ಪ್ರತಿಪಕ್ಷಗಳು
ಚರ್ಚೆ ಮಾಡಬೇಕಿತ್ತು. ಅದನ್ನು ಬಿಟ್ಟು ತಮಗೆ ಮನಬಂದಂತೆ ಹೇಳುವುದ ಸರಿಯಾದ ಕ್ರಮವಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಶಾಸಕ ಅರವಿಂದ ಬೆಲ್ಲದ ‌ಮುಂತಾದವರಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ