ಬಜೆಟ್ನಲ್ಲಿ ಐತಿಹಾಸಿಕ ಬಾದಾಮಿ ಕ್ಷೇತ್ರ ಕ್ಕೆ ಶೂನ್ಯ!!

ಸೋಮವಾರ, 9 ಜುಲೈ 2018 (17:09 IST)
ಮೈತ್ರಿ ಸರಕಾರದ ಮೊದಲ ಬಜೆಟ್ ಏನೋ ಮಂಡನೆಯಾಗಿದೆ. ಆದರೆ ಮುಖ್ಯಮಂತ್ರಿ ಹೆಚ್. ಡಿ. ಕೆ ಮೊದಲ ಬಜೆಟ್ ಗೆ ಕಾಂಗ್ರೆಸ್ ನಲ್ಲಿ ಅಪಸ್ವರ ಹಾಗೂ ಕರಾವಳಿ,  ಉತ್ತರ ಕರ್ನಾಟಕ ನಿರ್ಲಕ್ಷ್ಯಿಸಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿವೆ. ಇನ್ನೊಂದೆಡೆ ಸಿದ್ದರಾಮಯ್ಯ ಪ್ರತಿನಿಧಿಸುವ ಬಾದಾಮಿಗೆ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಬಿಡಿಗಾಸು ನೀಡದಿರುವುದಕ್ಕೆ ಈ ಭಾಗದ ಜನರು ಅತೃಪ್ತಿ ವ್ಯಕ್ತಪಡಿಸುತ್ತಿದ್ದಾರೆ.

ಮೈತ್ರಿ ಸರಕಾರದ ಬಜೆಟ್ ಮಂಡನೆಗೆ ಮೊದಲಿನಿಂದಲೂ ವಿರೋಧ ಕೇಳಿಬರುತ್ತಿತ್ತು. ಆ ಬೆನ್ನಲ್ಲೇ  ಮಾಜಿ ಸಿಎಂ ಸಿದ್ದರಾಮಯ್ಯ ಧರ್ಮಸ್ಥಳದ ಶಾಂತಿವನದಲ್ಲಿದ್ದುಕೊಂಡೆ ಬಾದಾಮಿ ಕ್ಷೇತ್ರದ ಅಭಿವೃದ್ಧಿ ನೆಪದಲ್ಲಿ ಸಿಎಂಗೆ ಪತ್ರ ಬರೆದಿದ್ದರು. ಸಿದ್ದರಾಮಯ್ಯ ರ ಪತ್ರ ಪೊಲಿಟಿಕ್ಸ್ ಬೆನ್ನಲ್ಲೇ ಬಜೆಟ್​ನಲ್ಲಿ ಬಾದಾಮಿಗೆ ಬಂಪರ್ ಕೊಡುಗೆ ಸಿಗಬಹುದೆಂದು ಜನರು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ  ಮಂಡನೆಯಾಗಿರುವ ಬಜೆಟ್ ನಿಂದ ಬಾದಾಮಿ ಜನರಿಗೆ ಶಾಕ್ ಆಗಿದೆ.

ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ. ಐತಿಹಾಸಿಕ ಬಾದಾಮಿ ಕ್ಷೇತ್ರಕ್ಕೆ ಯಾವುದೇ ಯೋಜನೆ ಘೋಷಣೆ ಮಾಡಿಲ್ಲ. ಇದ್ರಿಂದ ಬಾದಾಮಿ ಶಾಸಕ ಸಿದ್ದರಾಮಯ್ಯ ರ ಪತ್ರ ಪೊಲಿಟಿಕ್ಸ್ ಫೇಲಾಯ್ತಾ ಎನ್ನೋ ಮಾತುಗಳು ಕೇಳಿಬರ್ತಿವೆ.

ಇನ್ನು ಬಾದಾಮಿ ಶಾಸಕ ಸಿದ್ದರಾಮಯ್ಯ ಕ್ಷೇತ್ರ ಅಭಿವೃದ್ಧಿ ಕಾರ್ಯಗಳ ಸಂಬಂಧ 12 ದಿನದಲ್ಲೇ ಮೂರು ಪತ್ರಗಳನ್ನು ಸಿಎಂ ಎಚ್. ಡಿ. ಕುಮಾರಸ್ವಾಮಿಗೆ ಬರೆದಿದ್ರು. ಗುಳೇದಗುಡ್ಡ ಭಾಗದ ಕೆರೆಗೆ ನೀರು ತುಂಬಿಸುವದು. ಜವಳಿ ಪಾರ್ಕ್, ಪವರ್ ಲೂಮ್ ಪಾರ್ಕ್, ಹಾಗೂ ಗಾರ್ಮೆಂಟ್ ಸ್ಥಾಪನೆ ಜೊತೆಗೆ ಕುಡಿಯೋ ನೀರಿನ ಯೋಜನೆಗೆ ಅನುದಾನ ಬಿಡುಗಡೆ ಸಂಬಂಧ ಪತ್ರ ಬರೆದಿದ್ರು. ಬಳಿಕ ಪ್ರವಾಸೋದ್ಯಮ ಸಚಿವರಿಗೆ ಐತಿಹಾಸಿಕ ತಾಣಗಳಲ್ಲಿ ಮೂಲಸೌಕರ್ಯ ಕಲ್ಪಿಸುವಂತೆ.ಹಾಗೂ ಕ್ಷೇತ್ರ ದಲ್ಲಿ ಬೃಹತ್ ಕೈಗಾರಿಕೆ ಸ್ಥಾಪನೆ ಕುರಿತು ಕೈಗಾರಿಕೆ ಸಚಿವರಿಗೂ ಪತ್ರ ಬರೆದಿದ್ರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ