ಮೊಹಮ್ಮದ್ ಅಶ್ರಫ್ ಕೊಲೆ: ಪ್ರಮುಖ ಆರೋಪಿ ಭರತ್ ಕುಮ್ಡೇಲ್ ಬಂಧನ
ರಿಕ್ಷಾ ಚಾಲಕರಾಗಿದ್ದ ಮೊಹಮ್ಮದ್ ಅಶ್ರಫ್ ಅವರನ್ನ ಜೂನ್ 21ರಂದು ಬೆಂಜನಪದವು ಬಳಿ ಕೊಚ್ಚಿ ಕೊಲೆ ಮಾಡಲಾಗಿತ್ತು. ಈಗಾಗಲೇ, ಮತೀಯ ಸೂಕ್ಷ್ಮ ಪ್ರದೇಶ ದಕ್ಷಿಣ ಕನ್ನಡ ಜಿಲ್ಲೆ ಮತ್ತಷ್ಟು ಉದ್ವಿಗ್ನಗೊಂಡಿತ್ತು. ಪ್ರಮುಖ ಆರೋಪಿ ಬಜರಂಗದಳದ ಮುಖಂಡ ಭರತ್ ಕುಮ್ಡೇಲ್ ಬಂಧನದ ಬಳಿಕ ಮುಂಜಾಗ್ರತಾ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿಷೇಧಾಜ್ಞೆ ಮುಂದುವರೆಸಲಾಗಿದೆ.