ಸಮರ್ಪಕವಾಗಿ ವಿಲೇವಾರಿಯಾಗದ ಹಿನ್ನೆಲೆಯಲ್ಲಿ ಐಟಿ ಸಿಟಿ ಬೆಂಗಳೂರು ಗಬ್ಬೆದ್ದು ನಾರುತ್ತಿದೆ. ದಸರಾ ಹಬ್ಬದ ಹಿನ್ನೆಲೆಯಲ್ಲಿ ಖರೀದಿಯಾಗದ ಬಾಳೆ ಕಂದು , ಕುಂಬಳಕಾಯಿ ರಾಶಿ ರಾಶಿ ರಸ್ತೆ ಮೇಲೆ ಬಿದ್ದು ನಿರಂತರ ಸುರಿದ ಮಳೆಯಿಂದ ಕೊಳೆದು ನಾರುತ್ತಿದೆ.
ಆಯುಧ ಪೂಜೆ, ವಿಜಯದಶಮಿ ಹಬ್ಬದ ಹಿನ್ನೆಲೆಯಲ್ಲಿ ಪ್ರತಿ ನಿತ್ಯಕ್ಕಿಂತ 2.5 ಸಾವಿರ ಟನ್ ಹೆಚ್ಚುವರಿ ಕಸ ಉತ್ಪಾದನೆಯಾಗಿದೆ. ಆ ಕಸದ ಮೇಲೆ ನಿರಂತರ ಮಳೆ ಸುರಿಯುತ್ತಿದ್ದು , ಕೊಳೆತು ನಾರುತ್ತಿದೆ.
ಜನರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಬೆಳಗ್ಗೆ 10 ಗಂಟೆಯಾದರೂ ಕಸ ವಿಲೇವಾರಿಯಾಗಿಲ್ಲ. ಮಾರಾಟವಾಗದ ಬಾಳೆ ಕಂದು, ಕುಂಬಳಕಾಯಿ ಮತ್ತು ಹೂವು ಮತ್ತಿತರೆ ವಸ್ತುಗಳನ್ನು ವರ್ತಕರು ಅಲ್ಲೇ ಬಿಟ್ಟು ಹೋಗಿರುವುದಲ್ಲದೆ, ಅಂಗಡಿ ಮುಂಗಟ್ಟುಗಳವರು, ಬಾಳೆ ಕಂದು ಸೇರಿದಂತೆ ಮತ್ತಿತರರು ಹಸಿ ಕಸವನ್ನು ಹಾಕಿರುವುದರಿಂದ ರಾಶಿ ರಾಶಿ ತ್ಯಾಜ್ಯ ಬಿದ್ದಿದೆ.