ಕಳಸಾ ಬಂಡೂರಿ ಹೋರಾಟಗಾರರಿಂದ ಬೆಂಗಳೂರು ಚಲೋ

ಮಂಗಳವಾರ, 10 ಜುಲೈ 2018 (18:07 IST)
ರೈತರ ಸಾಲ‌ಸಂಪೂರ್ಣ ಮನ್ನಾ ಹಾಗೂ ಮಹದಾಯಿ‌ ಮತ್ತು ಕಳಸಾ- ಬಂಡೂರಿ ಯೋಜನೆ ಜಾರಿಗೆ ಆಗ್ರಹಿಸಿ
 ಕಳಸಾ -ಬಂಡೂರಿ ಹೋರಾಟ ಸಮನ್ವಯ ಸಮಿತಿ ಹೋರಾಟಗಾರರು ಬೆಂಗಳೂರು ಚಲೋ‌ ನಡೆಸಿದರು.
ನಗರದ ಸಂಗೊಳ್ಳಿರಾಯಣ್ಣ ವೃತ್ತದಿಂದ ರೈಲು ನಿಲ್ದಾಣದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಆ ಬಳಿಕ 
ರೈಲಿನಲ್ಲಿ ಬೆಂಗಳೂರಿನತ್ತ ರೈತರ ಪ್ರಯಾಣ ಬೆಳೆಸಿದರು. 

ರಾಜ್ಯ ಸರ್ಕಾರ ರೈತರ ಸಂಪೂರ್ಣ ಸಾಲಮನ್ನಾ ಮಾಡಬೇಕು. ಮಹದಾಯಿ ವಿವಾದ ಕೂಡಲೇ ಇತ್ಯರ್ಥ ಪಡಿಸಬೇಕೆಂದು ಒತ್ತಾಯಿಸಿ, ನಾಳೆ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲಿದ್ದಾರೆ. ನಾಲ್ಕು ಜಿಲ್ಲೆಗಳ ಒಂಭತ್ತು ತಾಲ್ಲೂಕಿನ ನೂರಾರು ರೈತರು ಬೆಂಗಳೂರು ಚಲೋ ಹೋರಾಟದಲ್ಲಿ ಭಾಗಿಯಾಗಲು ಈಗಾಗಲೇ ರೈಲು ಮೂಲಕ ತೆರಳಿದರು.  

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ