ಪೇಸ್ ಬುಕ್ ಮೂಲಕ ರಿಕ್ವೆಸ್ಟ್ ಕಳಿಸಿದ್ದ ರಿಯಾ ನಂತರ ಅವಿನಾಶ್ ಜೊತೆ ವಿಡಿಯೋ ಕಾಲ ಮತ್ತು ಚಾಟಿಂಗ್ ಮಾಡುತ್ತಿದ್ದರು. ಅದಲ್ಲದೇ, ಮುಂದೆ ಇಬ್ಬರು ನಗ್ನವಾಗಿ ವಿಡಿಯೋ ಕಾಲ್ನಲ್ಲಿ ಮಾತನಾಡುತ್ತಿದ್ದರು. ಈ ವಿಡಿಯೋವನ್ನು ಇಟ್ಟುಕೊಂಡೇ ಬ್ಲಾಕ್ಮೇಲ್ ಆರಂಭಿಸಿದ್ದಾಳೆ.
ಅದಲ್ಲದೇ, ಬ್ಲಾಕ್ ಮೇಲ್ ಮಾಡಿ ಅವಿನಾಶ್ನಿಂದ ಲಕ್ಷ ಲಕ್ಷ ಹಣ ಸುಲಿಗೆ ಮಾಡಿದ್ದ ಯುವತಿ ರಿಯಾ ಕೊಲೆಯಲ್ಲಿ ಅವಿನಾಶ್ ಕೈವಾಡವಿದೆ ಎಂದು ಬ್ಲಾಕ್ ಮೇಲ್ ಮಾಡಿದ್ದಾರೆ. ಸಿಬಿಐ ಅಧಿಕಾರಿ ಎಂದುಕೊಂಡು ರಾಹುಲ್ ಎಂಬಾತನಿಂದ ಕರೆ ಮಾಡಿ ಬೆದರಿಕೆ ಹಾಕಲಾಗಿದ್ದು, ವಿಚಾರಣೆಗೆಂದು ಕರೆದು ಹಂತ ಹಂತವಾಗಿ 5 ಲಕ್ಷ ಹಣ ವಸೂಲಿ ಮಾಡಿದ್ದಾರೆ. ವಂಚನೆ ಕುರಿತು ಸ್ನೇಹಿತರ ಸಹಕಾರದಿಂದ ಪೊಲೀಸರಿಗೆ ದೂರು ನೀಡಿದ ಅವಿನಾಶ್. ಈ ಕುರಿತು ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗೆ ಬಲೆ ಬಿಸಿದ್ದಾರೆ. ಆರೋಪಿಗಳಾದ ರಿಯಾ ಮತ್ತು ರಾಹುಲ್ ರಾಜಸ್ಥಾನ ಮೂಲದವರು ಎನ್ನಲಾಗಿದೆ.