ಬೆಂಗಳೂರು ಪ್ಲಾನ್ ಸಿಟಿಯೇ ಅಲ್ಲ: ಜಾರ್ಜ್

ಸೋಮವಾರ, 16 ಅಕ್ಟೋಬರ್ 2017 (14:07 IST)
ಬೆಂಗಳೂರು ನಗರ 1982 ರವರೆಗೆ ನಿಯಂತ್ರಣದಲ್ಲಿತ್ತು. ನಂತರ ಮಿತಿ ಮಿರಿ ಹೋಗಿದ್ದರಿಂದ ಸಮಸ್ಯೆಗಳು ಉದ್ಭವವಾಗುತ್ತಿವೆ ಎಂದು ನಗರಾಭಿವೃದ್ಧಿ ಖಾತೆ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.
ಮಾಜಿ ಸಿಎಂ ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿಯಾಗಿದ್ದಾಗ ಡಾಲರ್ಸ್ ಕಾಲೋನಿಯಲ್ಲಿ ಗಲಾಟೆಯಾಯಿತು.ತದ ನಂತರ ಪ್ಲಾನ್ ಇಲ್ಲದ ಬಡಾವಣೆಗಳು ತಲೆ ಎತ್ತಲು ಆರಂಭಿಸಿದವು ಎಂದು ತಿಳಿಸಿದ್ದಾರೆ.
 
ಸಾಕಷ್ಟು ಬಡಾವಣೆಗಳು ಯೋಜನೆಯಿಲ್ಲದೇ ನಿರ್ಮಾಣವಾಗುತ್ತಿರುವ ಹಿನ್ನೆಲೆಯಲ್ಲಿ ಪ್ರತಿನಿತ್ಯ ಸಮಸ್ಯೆಗಳು ತಲೆದೋರುತ್ತಿವೆ. ನೀರು ಹೊರಹೋಗಲು ಸಾಧ್ಯವಾಗುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
 
ಪ್ರಸಕ್ತ ವರ್ಷದಲ್ಲಿ ದಾಖಲೆಯ ಶತಮಾನದ ಮಳೆಯಾಗಿದ್ದರಿಂದ ಅನಾಹುತಗಳು ಸೃಷ್ಟಿಯಾಗಿವೆ ಎಂದು ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ.   

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ