ಬೆಂಗಳೂರಿನಲ್ಲಿ ಮೂವರು ಪಾಕ್ ಪ್ರಜೆಗಳ ಬಂಧನ

ಗುರುವಾರ, 25 ಮೇ 2017 (13:15 IST)
ಪಾಕಿಸ್ತಾನ ಮೂಲದ ಇಬ್ಬರು ಯುವತಿಯರು ಮತ್ತು ಓರ್ವ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.ಬಂಧಿತರು ಭಯೋತ್ಪಾದನೆಯ ಹಿನ್ನೆಲೆ ಹೊಂದಿದ್ದಾರೆಯೇ ಎನ್ನುವ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
 
ನಿನ್ನೆ ರಾತ್ರಿ ದಾಳಿ ಮಾಡಿದ ಸಿಸಿಬಿ ಅಧಿಕಾರಿಗಳು ಕೇರಳದ ಓರ್ವ ಯುವಕ ಸೇರಿದಂತೆ ಮೂವರು ಪಾಕ್ ಪ್ರಜೆಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಪ್ರವೀಣ್ ಸೂದ್ ತಿಳಿಸಿದ್ದಾರೆ.
 
25 ವರ್ಷ ವಯಸ್ಸಿನ ಸಮೀರಾ,  ಕಿರಣ್ ಗುಲಾಮ್ ಇಲಿ, ಖಾಸಿಫ್ ಶಮ್ಸುದ್ದಿನ್ ಅಕ್ರಮವಾಗಿ ಭಾರತವನ್ನು ಪ್ರವೇಶಿಸಿ 9 ತಿಂಗಳಿಂದ ಕುಮಾರಸ್ವಾಮಿ ಲೇಔಟ್‌ನಲ್ಲಿ ವಾಸವಾಗಿದ್ದರು. ಅವರ ಬಳಿ ಯಾವುದೇ ವೀಸಾ, ಪಾಸ್‌ಪೋರ್ಟ್ ಇಲ್ಲದೇ ವಾಸವಾಗಿದ್ದರು. ಅದಲ್ಲದೇ ನಮ್ಮ ದೇಶದ ಪ್ರಜೆಯಾಗಲು ಅಗತ್ಯವಾಗಿರುವ ಎಲ್ಲಾ ದಾಖಲೆಗಳನ್ನು ಹೊಂದಿದ್ದರು
 
ಕೇರಳದ ಗುಲಾಮ್ ಅಲಿ ಅಕ್ರಮವಾಗಿ ಪ್ರವೇಶಿಸಿದ ಪಾಕ್ ನಾಗರಿಕರಿಗೆ ಸಹಾಯ ನೀಡುತ್ತಿದ್ದನು ಎಂದು ಹಿರಿಯ ಪ್ರವೀಣ್ ಸೂದ್ ತಿಳಿಸಿದ್ದಾರೆ.
 
ಬಂಧಿತ ಪಾಕ್ ನಾಗರಿಕರು ಕರಾಚಿ ನಗರದವರಾಗಿದ್ದಾರೆ, ಆರೋಪಿಗಳು, ಕತಾರ್‌ನಿಂದ ಮಸ್ಕತ್‌ಗೆ ಬಂದು ಅಲ್ಲಿಂದ ಕಾಠ್ಮಂಡು ನಗರಕ್ಕೆ ಆಗಮಿಸಿ ನಂತರ ಭಾರತದೊಳಗೆ ಪ್ರವೇಶಿಸಿ ಪಾಟ್ನಾ ನಗರವನ್ನು ತಲುಪಿದ್ದರು. ಅಲ್ಲಿಂದ ನೇರವಾಗಿ ಬೆಂಗಳೂರಿಗೆ ಆಗಮಿಸಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 
 

ವೆಬ್ದುನಿಯಾವನ್ನು ಓದಿ