ಶತಮಾನಗಳ ದಾಖಲೆ ಅಳಿಸಿದ ಬೆಂಗಳೂರು ಮಳೆ

ಸೋಮವಾರ, 16 ಅಕ್ಟೋಬರ್ 2017 (08:53 IST)
ಬೆಂಗಳೂರು: ರಾಜ್ಯ ರಾಜಧಾನಿ ಇದೀಗ ಅಕ್ಷರಶಃ ಪ್ರಳಯ ಸದೃಶವಾಗಿದೆ. ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆ ಶತಮಾನಗಳಷ್ಟು ಹಳೆಯ ದಾಖಲೆಯನ್ನು ಅಳಿಸಿ ಹಾಕಿದೆ.

 
ಈ ವರ್ಷ ಒಟ್ಟಾರೆ 1620 ಎಂಎಂ ಮಳೆಯಾಗಿದ್ದು ಆ ಮೂಲಕ 115 ವರ್ಷಗಳ ಬಳಿಕ ಇಷ್ಟೊಂದು ಮಳೆ ಸುರಿದ ದಾಖಲೆ ಮಾಡಿದೆ. 2005 ರಲ್ಲಿ 1600 ಎಂಎಂ ಮಳೆಯಾಗಿತ್ತು. ಮಳೆಯ ಅಬ್ಬರಕ್ಕೆ ಬಲಿಯಾದವರ ಸಂಖ್ಯೆ 7ಕ್ಕೇರಿದೆ.

ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೆ ನಗರದಲ್ಲಿ ಜನರ ಜೀವನ ಸಂಪೂರ್ಣ ಹದಗೆಟ್ಟಿದೆ. ಮನೆಯೊಳಗೆ ನೀರು ನುಗ್ಗಿದ್ದು ಜನರು ಮನೆಯಿಂದ ಹೊರಬರಲಾರದ ಸ್ಥಿತಿಯಲ್ಲಿದ್ದಾರೆ. ಇಂದೂ ಕೂಡಾ ಮಳೆಯಾಗುವ ನಿರೀಕ್ಷೆಯಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ