ಬೆಂಗಳೂರು ಮಹಿಳೆಯ ದೇಹ 30 ಅಲ್ಲ, 50 ಪೀಸ್: ಮೃತದೇಹ ಜೋಡಿಸುವುದೇ ಸವಾಲು

Krishnaveni K

ಸೋಮವಾರ, 23 ಸೆಪ್ಟಂಬರ್ 2024 (10:23 IST)
Photo Credit: X
ಬೆಂಗಳೂರು: ದೆಹಲಿಯಲ್ಲಿ ನಡೆದಿದ್ದ ಶ್ರದ್ಧಾ ವಾಲ್ಕರ್ ಕೇಸ್ ನ್ನೂ ಮೀರಿಸುವಂತೆ ಬೆಂಗಳೂರಿನಲ್ಲಿ ಮಹಿಳೆಯ ಹತ್ಯೆ ಮಾಡಲಾಗಿತ್ತು. ಈಕೆಯ ಹತ್ಯೆ ಬಗ್ಗೆ ಮತ್ತಷ್ಟು ಭಯಾನಕ ಅಂಶಗಳು ಹೊರಗೆ ಬರುತ್ತಿದೆ.

ಬೆಂಗಳೂರಿನ ಮಾಲ್ ವೊಂದರಲ್ಲಿ ಸೇಲ್ಸ್ ಗರ್ಲ್ ಆಗಿ ಕೆಲಸ ಮಾಡುತ್ತಿದ್ದ 29 ವರ್ಷದ ಮಹಾಲಕ್ಷ್ಮಿ ಎಂಬಾಕೆಯನ್ನು ಭೀಕರವಾಗಿ ಹತ್ಯೆ ಮಾಡಿ ಫ್ರಿಡ್ಜ್ ನಲ್ಲಿ ಮೃತದೇಹ ಇರಿಸಲಾಗಿತ್ತು. ಮೊದಲು ಮೃತದೇಹ 30 ಪೀಸ್ ಮಾಡಿ ಫ್ರಿಡ್ಜ್ ನಲ್ಲಿ ತುಂಬಲಾಗಿತ್ತು ಎನ್ನಲಾಗಿತ್ತು. ಆದರೆ ಈಗ ಎಲ್ಲಾ ಲೆಕ್ಕ ಹಾಕಿದರೆ 50 ಪೀಸ್ ಆಗಿತ್ತು ಎಂಬ ಮಾಹಿತಿಯಿದೆ.

160 ಲೀ. ಫ್ರಿಡ್ಜ್ ನ ಮೊದಲ ರಾಕ್ ನಲ್ಲಿ ಮಹಾಲಕ್ಷ್ಮಿ ಕಾಲು, ತೊಡೆ, ಹೊಟ್ಟೆ ಇತ್ತು. ಎರಡನೇ ರಾಕ್ ನಲ್ಲಿ ಆಕೆಯ ಕೈ, ಎದೆ ಮತ್ತು ಇತರೆ ಮಾಂಸ, ಮೂರನೇ ರಾಕ್ ನಲ್ಲಿ ತಲೆ ಹಾಗೂ ದೇಹದ ಒಳಭಾಗಗಳನ್ನಿರಿಸಲಾಗಿತ್ತು. ಫ್ರಿಡ್ಜ್ ಪಕ್ಕದಲ್ಲೇ ಒಂದು ಸೂಟ್ ಕೇಸ್ ಪತ್ತೆಯಾಗಿದ್ದು, ಬಹುಶಃ ಅದರಲ್ಲಿ ಶವ ಸಾಗಿಸಲು ಆತ ಮೊದಲು ಯೋಜನೆ ರೂಪಿಸಿರಬಹುದು ಎಂದು ಅಂದಾಜಿಸಲಾಗಿದೆ. ಆದರೆ ಸಾಧ್ಯವಾಗಿಲ್ಲ ಎಂಬ ಕಾರಣಕ್ಕೆ ಫ್ರಿಡ್ಜ್ ನಲ್ಲಿರಿಸಬಹುದು ಎನ್ನಲಾಗಿದೆ.

ಆಕೆಯ ಮೃತದೇಹ ಯಾವ ಮಟ್ಟಿಗೆ ತಲುಪಿತ್ತೆಂದರೆ ಅದನ್ನು ಮತ್ತೆ ಒಟ್ಟುಗೂಡಿಸುವುದೇ ವೈದ್ಯರಿಗೆ ಸವಾಲಾಗಿತ್ತು. ಯಾಕೆಂದರೆ ಕೊಲೆ ಮಾಡಿದ ಬಳಿಕ ಮೃತದೇಹವನ್ನು ತುಂಡು ಮಾಡಲಾಗಿತ್ತೇ ಅಥವಾ ಹೊಡೆದು ಸಾಯಿಸಿರಬಹುದೇ ಎಂದು ಪೊಲೀಸರು ತನಿಖೆ ನಡೆಸಬೇಕಾಗುತ್ತದೆ. ಹೀಗಾಗಿ ಮರಣೋತ್ತರ ಪರೀಕ್ಷೆ ನಡೆಸುವ ವೇಳೆ ಈ ಎಲ್ಲಾ ಅಂಶಗಳನ್ನು ತಿಳಿದುಕೊಳ್ಳಬೇಕಾಗುತ್ತದೆ. ಹೀಗಾಗಿ ಬರೋಬ್ಬರಿ 2 ಗಂಟೆಗಳ ಕಾಲ ವೈದ್ಯರು ಮೃತದೇಹವನ್ನು ರೆಸೆಂಬಲ್ ಮಾಡಿ ಪರೀಕ್ಷೆ ನಡೆಸಬೇಕಾಯಿತು.

ಮಹಾಲಕ್ಷ್ಮಿ ಆಪ್ತನಾಗಿದ್ದವನೇ ಈ ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ. ಯಾಕೆಂದರೆ ಆತನ ಫೋನ್ ಕೂಡಾ ಸ್ವಿಚ್ ಆಫ್ ಬರುತ್ತಿರುವುದೇ ಇದಕ್ಕೆ ಕಾರಣ. ತಾನು ಕೆಲಸ ಮಾಡುತ್ತಿದ್ದ ಕಡೆ ಸಹೋದ್ಯೋಗಿಗಳ ಜೊತೆಗೂ ಮಹಾಲಕ್ಷ್ಮಿಗೆ ಕಿರಿಕ್ ಆಗಿತ್ತು ಎಂಬುದನ್ನು ಆಕೆಯ ಕುಟುಂಬದವರೇ ಮಾಹಿತಿ ನೀಡಿದ್ದಾರೆ. ಅತ್ತ ಪತಿ ಜೊತೆಯೂ ಕಿರಿಕ್ ಮಾಡಿಕೊಂಡು ದೂರವಾಗಿದ್ದಳು. ಇದೀಗ ಆಕೆಯ ಜೊತೆ ಆಪ್ತನಾಗಿದ್ದವನ ಜೊತೆಗೆ ಕಿರಿಕ್ ಆಗಿ ಈ ಕೊಲೆ ನಡೆದಿರಬಹುದು ಎಂದು ಶಂಕಿಸಲಾಗುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ